varthabharthi


ಅಂತಾರಾಷ್ಟ್ರೀಯ

ಯುದ್ಧದಲ್ಲಿ ಮುಖ್ಯಸ್ಥ ಮೃತ್ಯು: ಐಸಿಸ್‍ಗೆ ಹೊಸ ನಾಯಕ

ವಾರ್ತಾ ಭಾರತಿ : 1 Dec, 2022

ಬೇರೂತ್, ಲೆಬನಾನ್: ಇಸ್ಲಾಮಿಕ್ ಸ್ಟೇಟ್ ಗುಂಪಿನ ಮುಖ್ಯಸ್ಥ ಅಬು ಹಸನ್ ಅಲ್ ಹಾಶಿಮಿ ಅಲ್ ಖುರೇಷಿ (Abu Hasan al-Hashimi al-Qurashi) ಯುದ್ಧದಲ್ಲಿ ಮೃತಪಟ್ಟಿದ್ದಾನೆ ಎಂದು ಸಂಘಟನೆ ಪ್ರಕಟಿಸಿದೆ ಎಂದು ndtv.com ವರದಿ ಮಾಡಿದೆ.

"ಇರಾಕ್ ಮೂಲದ ಹಾಷಿಮಿ ಅವರು ದೇವರ ವಿರೋಧಿಗಳ ಜತೆಗಿನ ಹೋರಾಟದಲ್ಲಿ ಮೃತಪಟ್ಟಿದ್ದಾರೆ" ಎಂದು ಐಸಿಸ್ ವಕ್ತಾರ ಹೇಳಿದ್ದಾರೆ. ಆದರೆ ಯಾವಾಗ ಹಷಿಮಿ ಹತ್ಯೆಯಾಯಿತು ಅಥವಾ ಯಾವ ಪರಿಸ್ಥಿತಿಯಲ್ಲಿ ಮೃತಪಟ್ಟಿದ್ದು ಎನ್ನುವ ವಿವರಗಳನ್ನು ಬಹಿರಂಗಪಡಿಸಿಲ್ಲ.

ಅಬು ಅಲ್-ಹುಸೈನ್ ಅಲ್ ಹುಸೈನಿ ಅಲ್ ಖುರೇಷಿ (Abu al-Hussein al-Husseini al-Qurashi) ಯನ್ನು ಹೊಸ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ವಕ್ತಾರ ಧ್ವನಿ ಸಂದೇಶದಲ್ಲಿ ಬಹಿರಂಗಪಡಿಸಿದ್ದಾರೆ.

ನೂತನ ನಾಯಕನನ್ನು  ಎಲ್ಲ ನಿಷ್ಠ ಗುಂಪುಗಳು  ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ ಎಂದು ndtv.com ವರದಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)