ಗಲ್ಫ್ ಸುದ್ದಿ
ಸೌದಿಯೇತರರನ್ನು ವಿವಾಹವಾದ ಮಹಿಳೆಯರ ಮಕ್ಕಳಿಗೆ ಪೌರತ್ವ: ನೂತನ ರಾಜಾಜ್ಞೆ
ವಾರ್ತಾ ಭಾರತಿ : 14 Jan, 2023

PHOTO : Wikipedia
ರಿಯಾದ್: ಸೌದಿಯೇತರರನ್ನು ವಿವಾಹವಾದ ಸೌದಿ ಮಹಿಳೆಯರ ಮಕ್ಕಳಿಗೆ 18 ವರ್ಷ ತುಂಬಿದಾಗ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಹಕ್ಕನ್ನು ನೀಡುವ ರಾಜಾಜ್ಞೆಯನ್ನು ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅವರು ಹೊರಡಿಸಿದ್ದಾರೆ.
ಸೌದಿ ತಂದೆಯ ಮೂಲಕ ಜನಿಸಿದ ಮಕ್ಕಳಿಗೆ ಸೌದಿ ಪೌರತ್ವ ಸ್ವಯಂಚಾಲಿತವಾಗಿ ಲಭಿಸಲಿದ್ದು, ಸೌದಿ ಮಹಿಳೆ ಹಾಗೂ ವಲಸಿಗ ತಂದೆಗೆ ಹುಟ್ಟುವ ಮಕ್ಕಳು ಕೆಲವು ಷರತ್ತುಗಳನ್ನು ಪೂರೈಸಿದರೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಆದೇಶ ಹೇಳಿದೆ.
ಸೌದಿಯಲ್ಲಿ ಹುಟ್ಟಿ ಶಾಶ್ವತವಾಗಿ ಅಲ್ಲೇ ವಾಸಿಸಬೇಕು. ಸ್ಪುಟವಾಗಿ ಅರೇಬಿಕ್ ಮಾತನಾಡಲು ಬರಬೇಕು ಹಾಗೂ ಉತ್ತಮ ನಡೆವಳಿಕೆ ಹೊಂದಬೇಕು ಎಂದು ಷರತ್ತು ವಿಧಿಸಲಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)