varthabharthi


ಗಲ್ಫ್ ಸುದ್ದಿ

ಕೆಸಿಎಫ್, ಐಸಿಎಫ್ ಅಂತರಾಷ್ಟ್ರೀಯ ಮಟ್ಟದ ಸ್ವಾಲಿಹಾ ಮಹಿಳಾ ತರಗತಿಗೆ ಚಾಲನೆ

ವಾರ್ತಾ ಭಾರತಿ : 14 Jan, 2023

ದೋಹಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಖತರ್ ರಾಷ್ಟ್ರೀಯ ಸಮಿತಿ ವತಿಯಿಂದ ಅಂತರ್ರಾಷ್ಟ್ರೀಯ ಮಟ್ಟದ ಸ್ವಾಲಿಹಾ ಮಹಿಳಾ ತರಗತಿಯ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಐ.ಸಿ.ಎಫ್ ಪ್ರಧಾನ ಕಾರ್ಯದರ್ಶಿ ಡಾ.ಬಶೀರ್ ಪುತ್ತುಪ್ಪಾಡಂ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಲಪ್ಪುರಂ ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಅಂತರ್ರಾಷ್ಟ್ರೀಯ ಮಟ್ಚದ ಸ್ವಾಲಿಹಾ ಮಹಿಳಾ ತರಗತಿಯನ್ನು ಉದ್ಘಾಟಿಸಿದರು. 

ಸ್ವಾಲಿಹ ಕೋರ್ಸ್ ನ ಕತೃ  G.M ಕಾಮಿಲ್ ಸಖಾಫಿ, K.C.F ಅಂತರ್ರಾಷ್ಟ್ರೀಯ ಸಮಿತಿ ಅಧ್ಯಕ್ಷ D.P ಯೂಸುಫ್ ಸಖಾಫಿ ಬೈತಾರ್, ಕಾರ್ಯದರ್ಶಿ, P.M.H ಅಬ್ದುಲ್ ಹಮೀದ್ ಈಶ್ವರಮಂಗಲ, ಅಲಿ ಮುಸ್ಲಿಯಾರ್ ಬಹರೈನ್ ಆನ್ಲೈನ್ ಮೂಲಕ ಭಾಗವಹಿಸಿದ್ದರು.

ಈ ಸಂದರ್ಭ KCF ಖತರ್ ರಾಷ್ಟ್ರೀಯ ಸಮಿತಿ ಪ್ರತಿಭೋತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಕೆ.ಸಿ.ಎಫ್ ಖತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹನೀಫ್ ಪಾತೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಹ್ ರೂಫ್ ಸುಲ್ತಾನಿ ನಿರೂಪಿಸಿದರು. ಶಿಕ್ಷಣ ವಿಭಾಗ ಕಾರ್ಯದರ್ಶಿ ಸಿದ್ದೀಕ್ ಹಂಡುಗುಳಿ ಸ್ವಾಗತಿಸಿ, ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಫಾರೂಕ್ ಕೃಷ್ಣಾಪುರ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)