varthabharthi


ಬೆಂಗಳೂರು

ವಿಸ್ತರಣಾ ಕಾಮಗಾರಿ | ಜ.27ರಿಂದ 4 ದಿನ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ

ವಾರ್ತಾ ಭಾರತಿ : 24 Jan, 2023

ಬೆಂಗಳೂರು, ಜ. 24: ಕೆಂಗೇರಿಯಿಂದ ಚಲ್ಲಘಟ್ಟದ ವರೆಗೆ ಮೆಟ್ರೋ ವಿಸ್ತರಣಾ ಮಾರ್ಗದ ಕಾಮಗಾರಿ ಹಿನ್ನಲೆ ‘ನೇರಳೆ’ ಮಾರ್ಗದ ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿಯ ವರೆಗೆ ಮೆಟ್ರೋ ರೈಲು ಸಂಚಾರವನ್ನು ಜ.27ರಿಂದ 30ರ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ಅದಾಗ್ಯೂ, ಸದರಿ ದಿನಗಳಲ್ಲಿ ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆ ಲಭ್ಯ ಇರಲಿದೆ. ಜ.31ರಿಂದ ಬೈಯಪ್ಪನಹಳ್ಳಿಯಿಂದ ಕೆಂಗೇರಿಯ ವರೆಗೆ ಎಂದಿನಂತೆ ಮೆಟ್ರೋ ರೈಲು ಸೇವೆ ಲಭ್ಯವಿರಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)