varthabharthi


ಕರ್ನಾಟಕ

''ನಾನು ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಆದರೆ...''

ಪಕ್ಷ ತೀರ್ಮಾನಿಸಿದರೆ ಹೊಳೆನರಸೀಪುರದಿಂದ ಸ್ಪರ್ಧೆ: BJP ಶಾಸಕ ಪ್ರೀತಂ ಗೌಡ

ವಾರ್ತಾ ಭಾರತಿ : 24 Jan, 2023

ಹಾಸನ, ಜ.24: 'ನಮ್ಮ ಪಕ್ಷವು ಏನಾದ್ರೂ ಅರಸೀಕರೆನೊ, ಹೊಳೆನರಸೀಪುರ , ಚನ್ನರಾಯಪಟ್ಟಣಕ್ಕೊ ನನ್ನನ್ನು ಅಭ್ಯರ್ಥಿ ಆಗಬೇಕು ಎಂದರೆ ನಾನು ಯೋಚನೆ ಮಾಡುವುದಿಲ್ಲ. ಹಾಸನದಲ್ಲಿ ಒಬ್ಬ ಕಾರ್ಯಕರ್ತನಿಗೆ ಜವಬ್ದಾರಿ ಕೊಟ್ಟು ಬೇರೆ ಕ್ಷೇತ್ರದಿಂದ ಸರ್ಧಿಸಲು ಸಿದ್ಧನಿದ್ದೇನೆ' ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ. 

ನಗರದ ಹೊರ ವಲಯದಲ್ಲಿರುವ ಎಚ್‍ಎಂಟಿ ಕಲ್ಯಾಣ ಮಂಟಪದಲ್ಲಿ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ಶಾಸಕರು, 'ನಿಮ್ಮಂತೆ ನಾನೂ ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆಂದು ಕಾಯುತ್ತಿದ್ದೇನೆ. ಹಾಗೆಯೇ ಜೆಡಿಎಸ್ ಕಾಂಗ್ರೆಸ್ ನಲ್ಲೂ ಚರ್ಚೆ ಆಗುತ್ತಿದೆ. ನಾಮಪತ್ರ ಸಲ್ಲಿಕೆ ಆಗುವವರೆಗೂ ಜನರ ನಡುವೆ ಎಲ್ಲರೂ ಕೆಲಸ ಮಾಡುತ್ತಾರೆ. ನಾನೂ ಓರ್ವ ಆಕಾಂಕ್ಷಿಯಾಗಿ ಶಾಸಕನಾಗಿ ನಾನೂ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಯಾರನ್ನು ತೀರ್ಮಾನ ಮಾಡುತ್ತೋ ಅವರು ಅಭ್ಯರ್ಥಿ ಆಗುತ್ತಾರೆ' ಎಂದು ಹೇಳಿದರು. 

'ಹಾಸನದ ಶಾಸಕನಾಗಿ ನಾನೂ ಅಭ್ಯರ್ಥಿ ಆಗಬೇಕು ಎಂಬ ಅಪೇಕ್ಷೆ ವ್ಯಕ್ತಪಡಿಸಿದ್ದೆನೆ. ಆದರೆ ಹಿರಿಯರ ತೀರ್ಮಾನಕ್ಕೆ ಬದ್ಧ. ಕರ್ನಾಟಕದಲ್ಲಿ ಗುಜರಾತ್​ ಮಾಡೆಲ್ ಅನ್ವಯ ಆಗುತ್ತೋ ಏನೋ ನನಗೆ ಮಾಹಿತಿ ಇಲ್ಲ' ಎಂದರು. 

'ಸಿದ್ದರಾಮಯ್ಯ ಅವರ ಕ್ಯಾಬಿನೆಟ್ ನಲ್ಲಿ ಒಬ್ಬರೇ ಒಬ್ಬರು ಕುರುಬ ಜನಾಂಗದ ನಾಯಕರಾಗಿ ಮುಖ್ಯಮಂತ್ರಿ ಆಗಿದ್ದರು. ಮತ್ತೊಬ್ಬರ ಯಾರನ್ನು ಮಾಡಲಿಲ್ಲ. ಹಿಂದುಳಿದ ಸಮಾಜದವರ ಯಾರನ್ನು ಮಂತ್ರಿ ಮಾಡಬೇಕು ಎಂದು ಮನಸ್ಸು ಬರಲಿಲ್ಲ. ಅವರಿಗೆ ಈ ಸಮುದಾಯದ ಮತಗಳು ಮಾತ್ರ ಬೇಕು. ಅಧಿಕಾರ ಮಾತ್ರ ನಮಗೆ ಇರಬೇಕು ಎನ್ನುವ ಭಾವನೆಯಾಗಿತ್ತು. ಇನ್ನು ದೇವೇಗೌಡರಿಗೆ ಒಕ್ಕಲಿಗರ ಮತ ಎಲ್ಲಾ ಬೇಕು. ಅಧಿಕಾರವ ವಿಚಾರ ಬಂದರೆ ಅವರ ಅಪ್ಪ, ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಮಾತ್ರ ಸೀಮಿತ' ಎಂದು ಕಿಡಿಕಾರಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)