ಕರ್ನಾಟಕ
ಬೆಳಗಾವಿ | 'ಪಠಾಣ್' ಪ್ರದರ್ಶನಕ್ಕೆ ವಿರೋಧ, ಚಿತ್ರಮಂದಿರ ಮೇಲೆ ಕಲ್ಲು ತೂರಾಟ: ನಾಲ್ವರು ವಶಕ್ಕೆ

photo credit- twitter.com
ಬೆಳಗಾವಿ,ಜ. 24: ಶಾರುಖ್ ಖಾನ್ ಅವರ ಬಹು ನಿರೀಕ್ಷಿತ 'ಪಠಾಣ್' ಚಿತ್ರ ಪ್ರದರ್ಶನ ವಿರೋಧಿಸಿ, ಕೆಲವು ಕಿಡಿಗೇಡಿಗಳು ನಗರದ ಚಿತ್ರಮಂದಿರ ಒಂದರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ವರದಿಯಾಗಿದೆ.
ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ನಾಲ್ವರು ಯುವಕರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಯುವಕರು ಚಿತ್ರ ಪ್ರದರ್ಶನ ವಿರೋಧಿಸಿ ಚಿತ್ರಮಂದಿರ ಬಳಿ ಗಲಾಟೆ ನಡೆಸಿದ್ದರೆನ್ನಲಾಗಿದ್ದು, ಸಂಜೆ ಸಿನೆಮಾ ಪ್ರದರ್ಶನ ಆರಂಭಿಸಿದ್ದರಿಂದ ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು 'ಪಠಾಣ್' ಬಿಡುಗಡೆಗಾಗಿ ಕಾಯುತ್ತಿರುವ ಶಾರುಖ್ ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಲು ಉತ್ಸುಕರಾಗಿದ್ದು, ನಾಳೆ 100ಕ್ಕೂ ಹೆಚ್ಚು ದೇಶಗಳಲ್ಲಿ 2,500 ಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಬಿಡುಗಡೆಗೆ ಮುನ್ನವೇ ದಾಖಲೆ ಸೃಷ್ಟಿಸಿದ 'ಪಠಾಣ್'
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ