varthabharthi


ದಕ್ಷಿಣ ಕನ್ನಡ

ಮಂಗಳೂರು: ವಿಚಾರಣಾಧೀನ ಕೈದಿಯಲ್ಲಿ ಗಾಂಜಾ ಪತ್ತೆ

ವಾರ್ತಾ ಭಾರತಿ : 24 Jan, 2023

ಮಂಗಳೂರು: ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿ ಮರಳಿ ಕಾರಾಗೃಹಕ್ಕೆ ಕರೆತಂದ ವಿಚಾರಣಾಧೀನ ಕೈದಿಯ ಬಳಿ ಗಾಂಜಾ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮುಹಮ್ಮದ್ ಅಸ್ರು ಯಾನೆ ಮುಹಮ್ಮದ್ ಅಲಿ ಎಂಬಾತನನ್ನು ಇತರ ವಿಚಾರಣಾಧೀನ ಕೈದಿಗಳೊಂದಿಗೆ ಜ.23ರಂದು ಬಂಟ್ವಾಳದ ನ್ಯಾಯಾಲಯಕ್ಕೆ ಡಿಎಆರ್ ಬೆಂಗಾವಲಿನ ಮೂಲಕ ಕಳುಹಿಸಿಕೊಡಲಾಗಿತ್ತು ಎನ್ನಲಾಗಿದೆ.

ಮರಳಿ ಕಾರಾಗೃಹಕ್ಕೆ ಬರುವಾಗ ಮುಖ್ಯದ್ವಾರದಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಆತನ ಬಳಿ ಪ್ಯಾಕ್ ಮಾಡಿಟ್ಟ ಗಾಂಜಾ ಪತ್ತೆಯಾಗಿದೆ ಎಂದು ಬರ್ಕೆ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)