varthabharthi


ರಾಷ್ಟ್ರೀಯ

ಕಾಫಿಡೇಗೆ 32 ಲಕ್ಷ ಡಾಲರ್ ದಂಡ ವಿಧಿಸಿದ ಸೆಬಿ

ವಾರ್ತಾ ಭಾರತಿ : 25 Jan, 2023

Photo: PTI

ಮುಂಬೈ: ಕಾಫಿಡೇ ಎಂಟರ್‌ಪ್ರೈಸಸ್‌ಗೆ 260 ದಶಲಕ್ಷ ರೂಪಾಯಿ ದಂಡವನ್ನು ವಿಧಿಸಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಆದೇಶ ನೀಡಿದೆ.

ಸಹ ಸಂಸ್ಥೆಗಳಿಂದ ಬಾಕಿ ವಸೂಲಿ ಮಾಡಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳವಾರ ಸೆಬಿ ವೆಬ್‌ಸೈಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ಅಂತೆಯೇ ಕಾಫಿಡೇ, ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್ ಮತ್ತು ಇತರ ಸಂಬಂಧಿತ ಕಂಪನಿಗಳಿಂದ 33.35 ಶತಕೋಟಿ ರೂಪಾಯಿ ಬಾಕಿ ವಸೂಲಿ ಮಾಡಿಕೊಳ್ಳುವಂತೆಯೂ ಆದೇಶಿಸಲಾಗಿದೆ.

ಈ ನಿಧಿ ಕಂಪನಿಯಿಂದ ವಿಮುಖವಾಗಿಸಿದ ನಿಧಿಯಾಗಿದ್ದು, ಇದರ ಏಳು ಸಹ ಸಂಸ್ಥೆಗಳು ಷೇರುದಾರರಿಗೆ ನಷ್ಟಕ್ಕೆ ಕಾರಣವಾಗಿವೆ ಎಂದು ಸೆಬಿ ಹೇಳಿದೆ. ಈ ದಂಡವನ್ನು 45 ದಿನಗಳ ಒಳಗಾಗಿ ಪಾವತಿಸುವಂತೆ ಸೂಚಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)