ಕರ್ನಾಟಕ
ಚಾಮರಾಜನಗರ | ಮಹದೇಶ್ವರ ಬೆಟ್ಟದಲ್ಲಿ ಬಸ್ ಪಲ್ಟಿ; 20 ಪ್ರವಾಸಿಗರಿಗೆ ಗಾಯ
ವಾರ್ತಾ ಭಾರತಿ : 25 Jan, 2023

ಚಾಮರಾಜನಗರ, ಜ.25: ಗುಜರಾತ್ ಮೂಲದ ಬಸ್ಸೊಂದು ಮಲೈ ಮಹದೇಶ್ವರ ಬೆಟ್ಟ ಪಾಲರ್ ನಡುವಿನ ಘಾಟ್ ನಲ್ಲಿ ಉರುಳಿಬಿದ್ದ ಘಟನೆ ವರದಿಯಾಗಿದೆ.
ಘಟನೆಯಲ್ಲಿ ಬಸ್ಸಿನಲ್ಲಿದ್ದ 50 ಪ್ರವಾಸಿಗರ ಪೈಕಿ ಸುಮಾರು 20 ಮಂದಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಪ್ರವಾಸಕ್ಕೆಂದು ಬಂದಿದ್ದ ಗುಜರಾತ್ ಮೂಲದ ಬಸ್ ಮಹದೇಶ್ವರ ಬೆಟ್ಟ ಪಾಲರ್ ನಡುವಿನ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿಬಿದ್ದಿದೆ. ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಲಾಗಿದೆ.
ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿದ್ದಾರೆ.




‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)