ಕ್ರೀಡೆ
ಹಾಕಿ ವಿಶ್ವಕಪ್: 13 ವರ್ಷಗಳ ಬಳಿಕ ಜರ್ಮನಿ ಫೈನಲ್‌ಗೆ
ವಾರ್ತಾ ಭಾರತಿ : 27 Jan, 2023

Germany team, Photo: AP
ರೂರ್ಕೆಲಾ, ಜ.27: ವಿಶ್ವದ ನಂ.1 ಆಸ್ಟ್ರೇಲಿಯ ತಂಡವನ್ನು 4-3 ಅಂತರದಿಂದ ರೋಚಕವಾಗಿ ಮಣಿಸಿದ ಜರ್ಮನಿ 13 ವರ್ಷಗಳ ಬಳಿಕ ಮೊದಲ ಬಾರಿ ಹಾಕಿ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದೆ.
ಶುಕ್ರವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ ಜರ್ಮನಿ 2010ರ ಬಳಿಕ 5ನೇ ಬಾರಿ ವಿಶ್ವಕಪ್ ಫೈನಲ್ ತಲುಪಿತು. ಜರ್ಮನಿಯು 43ನೇ, 52ನೆ ಹಾಗೂ 59ನೇ ನಿಮಿಷದಲ್ಲಿ ಗೋಲುಗಳಿಸಿತು. ಆಸ್ಟ್ರೇಲಿಯ 12ನೇ, 27ನೇ ಹಾಗೂ 58ನೇ ನಿಮಿಷದಲ್ಲಿ ಗೋಲು ಗಳಿಸಿತು.
ಜರ್ಮನಿ ಜ.29ರಂದು ನಡೆಯುವ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
2ನೇ ಸೆಮಿ ಫೈನಲ್ 2-2ರಿಂದ ಸಮಬಲಗೊಂಡ ಬಳಿಕ ಬೆಲ್ಜಿಯಂ ತಂಡ ನೆದರ್‌ಲ್ಯಾಂಡ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಅಂತರದಿಂದ ಮಣಿಸಿತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)