ರಾಷ್ಟ್ರೀಯ
ಗುಜರಾತ್: ಬೈಕ್ ಸವಾರನಿಗೆ ಡಿಕ್ಕಿ ಹೊಡೆದು 12 ಕಿ.ಮೀ. ಎಳೆದೊಯ್ದು ಕೊಂದ ಆರೋಪಿಯ ಬಂಧನ

Photo: PTI
ಸೂರತ್ (ಗುಜರಾತ್): ಸೂರತ್‌ನಲ್ಲಿ ಬೈಕ್ ಸವಾರನಿಗೆ ತನ್ನ ಕಾರಿನಿಂದ ಡಿಕ್ಕಿ ಹೊಡೆದುದಲ್ಲದೆ ಕಾರಿನ ಕೆಳಗೆ ಬಿದ್ದಿದ್ದ ಬೈಕ್ ಸವಾರನನ್ನು 12 ಕಿಲೋಮೀಟರ್ ಎಳೆದೊಯ್ದು ಕೊಂದ ಆರೋಪದ ಮೇಲೆ ಗುರುವಾರ ಓರ್ವ ವ್ಯಕ್ತಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಸಾಗರ್ ಪಾಟೀಲ್ ಎಂದು ಗುರುತಿಸಲಾಗಿದ್ದು, ಅವರು ಬೈಕ್ ಚಲಾಯಿಸುತ್ತಿದ್ದರು ಹಾಗೂ ಅವರ ಪತ್ನಿ ಹಿಂಬದಿ ಕುಳಿತ್ತಿದ್ದರು.
ಡಿ. 18ರಂದು ದಂಪತಿ ತೆರಳುತ್ತಿದ್ದ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದು ಅಪಘಾತ ಸ್ಥಳದಿಂದ ಪರಾರಿಯಾಗಿದೆ. ಅಪಘಾತದ ಸ್ಥಳದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ, ಆದರೆ ಪಾಟೀಲ್ ಶವ ಘಟನಾ ಸ್ಥಳದಿಂದ 12 ಕಿಮೀ ದೂರದಲ್ಲಿ ಪತ್ತೆಯಾಗಿದೆ. ಪಾಟೀಲ್ ರನ್ನು 12 ಕಿಮೀ ದೂರಕ್ಕೆ ಎಳೆದುಕೊಂಡು ಹೋಗಲಾಗಿದೆ.
ಅಪಘಾತದ ನಂತರ ಆರೋಪಿ ಮುಂಬೈ ಮತ್ತು ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ.
ಸುಳಿವು ಆಧರಿಸಿ, ಗುರುವಾರ ಕಾಮ್ರೇಜ್ ಟೋಲ್ ಪ್ಲಾಝಾದಲ್ಲಿ ಸೂರತ್‌ಗೆ ಪ್ರವೇಶಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಯಿತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ