varthabharthi


ರಾಷ್ಟ್ರೀಯ

BBC ಸಾಕ್ಷ್ಯಚಿತ್ರ ಪ್ರದರ್ಶನ ಕುರಿತ ಗದ್ದಲ, ಘರ್ಷಣೆ ತನಿಖೆಗೆ 7 ಸದಸ್ಯರ ಸಮಿತಿ ರಚಿಸಿದ ದಿಲ್ಲಿ ವಿವಿ

ವಾರ್ತಾ ಭಾರತಿ : 28 Jan, 2023

Photo: NDTV

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ 2002 ರ ಗುಜರಾತ್‌ ಗಲಭೆಗಳಿಗೆ ಸಂಬಂಧಿಸಿದ ಬಿಬಿಸಿ (BBC) ಸಾಕ್ಷ್ಯಚಿತ್ರ ಪ್ರದರ್ಶನ ಕುರಿತಂತೆ ದಿಲ್ಲಿ ವಿಶ್ವವಿದ್ಯಾಲಯದ (Delhi University) ಕಲಾ ವಿಭಾಗದ ಕಟ್ಟಡದ ಹೊರಗೆ ಉಂಟಾದ ಘರ್ಷಣೆಗಳ ತನಿಖೆ ನಡೆಸಲು ಏಳು ಸದಸ್ಯರ ಸಮಿತಿಯನ್ನು ವಿವಿ ರಚಿಸಿದೆ.

ವಿವಿಯ ಪ್ರೊಕ್ಟೊರ್‌ ರಜಿನಿ ಅಬ್ಬಿ ಈ ಸಮಿತಿಯ ಅಧ್ಯಕ್ಷರಾಗಿದ್ದು ಜನವರಿ 30 ರಂದು ಸಂಜೆ 5 ಗಂಟೆಯೊಳಗಾಗಿ ಅವರು ಉಪಕುಲಪತಿ ಯೊಗೇಶ್‌ ಸಿಂಗ್‌ ಅವರಿಗೆ ವರದಿ ಸಲ್ಲಿಸಬೇಕಿದೆ.

ಕ್ಯಾಂಪಸ್ಸಿನಲ್ಲಿ ಶಿಸ್ತು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸಮಿತಿ ರಚಿಸಲಾಗಿದೆ ಎಂದು ವಿವಿ ಹೇಳಿದೆ. ವಿವಿಯ ಕಲಾ ವಿಭಾಗದ ಕಟ್ಟಡದ ಹೊರಗೆ ಹಾಗೂ ಗೇಟ್‌ ಸಂಖ್ಯೆ 4 ರ ಎದುರು ಜನವರಿ 27 ರಂದು ನಡೆದ ಘಟನೆಗಳನ್ನು ಸಮಿತಿ ತನಿಖೆ ನಡೆಸಲಿದೆ ಎಂದು ವಿವಿ ಹೇಳಿದೆ.

ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಲು ವಿದ್ಯಾರ್ಥಿಗಳು ಯತ್ನಿಸುತ್ತಿರುವಂತೆಯೇ ಅಲ್ಲಿ ಗದ್ದಲದ ವಾತಾವರಣವುಂಟಾಯಿತು ಹಾಗೂ ಪೊಲೀಸರು  ಮತ್ತು ವಿವಿ ಆಡಳಿತ ಹಸ್ತಕ್ಷೇಪ ನಡೆಸಬೇಕಾಯಿತು.

ಘಟನೆಯ ನಂತರ ಎನ್‌ಎಸ್‌ಯುಐಗೆ ಸೇರಿದ 24 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತಲ್ಲದೆ ಪೊಲೀಸ್‌ ಪಡೆಯನ್ನೂ ವಿವಿಯ ನಾರ್ತ್‌ ಕ್ಯಾಂಪಸ್‌ನಲ್ಲಿ ನಿಯೋಜಿಸಲಾಗಿತ್ತು.

ಹೊರಗಿನ ವ್ಯಕ್ತಿಗಳು ಈ ಸಾಕ್ಷ್ಯಚಿತ್ರ ಪ್ರದರ್ಶಿಸಲು ಯತ್ನಿಸಿದ್ದರು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರನ್ನು ಕರೆಸಲಾಗಿತ್ತು ಎಂದು ವಿವಿ ಹೇಳಿದೆ.

ಇದನ್ನೂ ಓದಿ: ಬಿಹಾರದ ಪುರ್ನಿಯಾದಲ್ಲಿ ಪಾಕ್ ಧ್ವಜ ಹಾರಿಸಲಾಗಿತ್ತೇ?: ಪ್ರಮುಖ ಮಾಧ್ಯಮಗಳ ವರದಿಯ ಸತ್ಯಾಂಶ ಇಲ್ಲಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)