varthabharthi


ರಾಷ್ಟ್ರೀಯ

ಮಧ್ಯಪ್ರದೇಶ: ಪತ್ರಕರ್ತನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಗುಂಪು.!

ವಾರ್ತಾ ಭಾರತಿ : 28 Jan, 2023

ಭೋಪಾಲ್: ಜನವರಿ 25 ರಂದು ಮಧ್ಯಪ್ರದೇಶದ ಹೋಶಂಗಾಬಾದ್‌ನ ಹಳ್ಳಿಯೊಂದರಲ್ಲಿ 25 ವರ್ಷದ ಪತ್ರಕರ್ತರೊಬ್ಬರನ್ನು ಮರಕ್ಕೆ ಕಟ್ಟಿಹಾಕಿ ವ್ಯಕ್ತಿಗಳ ಗುಂಪೊಂದು ಹಲ್ಲೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕೆಲವು ವಾರಗಳ ಹಿಂದೆ ನಡೆದ ಕ್ಷುಲ್ಲಕ ವಾಗ್ವಾದಕ್ಕೆ ಸಂಬಂಧಿಸಿ ದಾಳಿ ನಡೆಸಿದ್ದು, ಥಳಿಸುತ್ತಿರುವ ವಿಡಿಯೋ ಚಿತ್ರೀಕರಿಸಿದ್ದಾರೆ. ವಿಡಿಯೋದಲ್ಲಿ ಚಪ್ಪಲಿಯಿಂದ ಹೊಡೆಯುತ್ತಿರುವುದು ಕಂಡು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಸಂತ್ರಸ್ತನನ್ನು ಟಿವಿ ಮತ್ತು ಆನ್‌ಲೈನ್ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುವ ಪತ್ರಕರ್ತ ಪ್ರಕಾಶ್ ಯಾದವ್ ಎಂದು ಗುರುತಿಸಲಾಗಿದೆ. 

 ಜನವರಿ 1 ರಂದು ಪ್ರಕಾಶ್‌ ಬೈಕಿನಲ್ಲಿ ಬರುತ್ತಿದ್ದಾಗ ದಾರಿಕೊಡುವ ವಿಚಾರದಲ್ಲಿ ನಾರಾಯಣ ಯಾದವ ಎಂಬವನೊಂದಿಗೆ ವಾಗ್ವಾದ ವಾಗಿದೆ. ಇದೇ ಧ್ವೇಷದಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ” ಎಂದು ಪತ್ರಕರ್ತ ದೂರು ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)