varthabharthi


ರಾಷ್ಟ್ರೀಯ

ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ ಫೇಸ್ ಬುಕ್ ನಲ್ಲಿ ಸಾವರ್ಕರ್ ಪೋಸ್ಟರ್ !

ವಾರ್ತಾ ಭಾರತಿ : 28 Jan, 2023

ಹೊಸದಿಲ್ಲಿ,ಜ.28: ಕೇರಳದ ಕಾಂಗ್ರೆಸ್(Congress) ನಾಯಕರೊಬ್ಬರು ತನ್ನ ಫೇಸ್ ಬುಕ್(facebook) ಪುಟದಲ್ಲಿ ಪ್ರಸಾರ ಮಾಡಿದ ಗಣರಾಜ್ಯೋತ್ಸವ ಶುಭಾಶಯದಲ್ಲಿ ಹಿಂದುತ್ವವಾದಿ ನಾಯಕ ವಿ.ಡಿ. ಸಾವರ್ಕರ್(V.D Savarkar) ಅವರ ಭಾವಚಿತ್ರವನ್ನು ಪ್ರದರ್ಶಿಸಿದ್ದು, ಅವರ ಪಕ್ಷದ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಕಾಸರಗೋಡು(Kasaragod) ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪಿ.ಕೆ. ಫೈಸಲ್(P.K Faizal) ಅವರು ಈ ಪೋಸ್ಟನ್ನು ಪ್ರಸಾರ ಮಾಡಿದ್ದರು.     

ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಭಟನೆಯನ್ನು ಎದುರಾದ ಬಳಿಕ ಅವರು ಅದನ್ನು ತೆಗೆದುಹಾಕಿದ್ದಾರೆ. ಪೋಸ್ಟರ್ ನ ವಿನ್ಯಾಸಕಾರನಿಂದ ಆದ ಪ್ರಮಾದ ಇದಾಗಿದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ. ಈ ಫೇಸ್ಬುಕ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಹಾಗೂ ಹಲವಾರು ಮಂದಿ ಅದನ್ನು ಶೇರ್ ಮಾಡಿಕೊಂಡಿದ್ದರು.

‘‘ಗಣರಾಜ್ಯೋತ್ಸವದ ಸಲುವಾಗಿ ರೂಪಿಸಲಾಗಿದ್ದ ಪೋಸ್ಟರ್ ನ  ವಿನ್ಯಾಸಕಾರನಿಂದಾದ ಪ್ರಮಾದ ಇದಾಗಿದೆ. ನನ್ನ ಫೇಸ್ ಬುಕ್ ಖಾತೆಯನ್ನು ನನ್ನ ಕಾರ್ಯಾಲಯದ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ನಾವೀಗ ಈ ಪ್ರಮಾದವನ್ನು ಸರಿಪಡಿಸಿದ್ದೇವೆ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸಾವರ್ಕರ್ ಅವರಂತಹ ವ್ಯಕ್ತಿಗಳನ್ನು ಅನುಮೋದಿಸುವುದಲ್ಲ ಎಂದು ಫೈಸಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಕಳೆದ ಸೆಪ್ಟೆಂಬರ್ ನಲ್ಲಿ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯನ್ನು ಸ್ವಾಗತಿಸಲು ಅಳವಡಿಸಲಾಗಿದ್ದ 88 ಅಡಿ ವಿಸ್ತೀರ್ಣದ ಬ್ಯಾನರ್ ನಲ್ಲಿ ಸಾವರ್ಕರ್ ಅವರ ಭಾವಚಿತ್ರವಿದ್ದುದು ವಿವಾದಕ್ಕೆ ಗ್ರಾಸವಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)