varthabharthi


ರಾಷ್ಟ್ರೀಯ

ರಾಷ್ಟ್ರಪತಿ ಭವನದಲ್ಲಿರುವ ಮೊಗಲ್ ಉದ್ಯಾನಕ್ಕೆ ಅಮೃತ್ ಉದ್ಯಾನ್ ಎಂದು ಮರು ನಾಮಕರಣ

ವಾರ್ತಾ ಭಾರತಿ : 28 Jan, 2023

PHOTO : Twitter

ಹೊಸದಿಲ್ಲಿ, ಜ. 28: ರಾಷ್ಟ್ರಪತಿ ಭವನ(Rashtrapati Bhavan)ದಲ್ಲಿರುವ ಮೊಗಲ್ ಉದ್ಯಾನ(Mughal Gardens)ಕ್ಕೆ ಅಮೃತ್ ಉದ್ಯಾನ್(amrit udyan) ಎಂದು ಮರು ನಾಮಕರಣ ಮಾಡಲಾಗಿದೆ ಎಂದು ರಾಷ್ಟ್ರಪತಿ ಅವರ ಅಧಿಕೃತ ವೆಬ್ಸೈಟ್ ಶನಿವಾರ ತೋರಿಸಿದೆ.

ಸ್ವಾತಂತ್ರದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಹೆಸರು ಬದಲಾವಣೆ ಮಾಡಿದೆ ಎಂದು ರಾಷ್ಟ್ರಪತಿ ಅವರ ಮಾಧ್ಯಮದ ಉಪ ಕಾರ್ಯದರ್ಶಿ ನಾವಿಕ ಗುಪ್ತಾ(Navik Gupta) ಅವರು ತಿಳಿಸಿದ್ದಾರೆ.

ಕಳೆದ ವರ್ಷ ದಿಲ್ಲಿ ರಾಜಪಥಕ್ಕೆ ಕರ್ತವ್ಯ ಪಥ ಎಂದು ಮರು ನಾಮಕರಣ ಮಾಡಲಾಗಿತ್ತು. ಈ ಹಿಂದಿನ ಹೆಸರು ‘‘ವಸಾಹತುಶಾಹಿ ಮನಸ್ಥಿತಿ’’ಯನ್ನು ಬಿಂಬಿಸುತ್ತಿತ್ತು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಮೀನಾಕ್ಷಿ ಲೇಖಿ ಅವರು ಹೇಳಿದ್ದರು. ಆದರೂ, ರಾಷ್ಟ್ರಪತಿ ಭವನದ ವೆಬ್ಸೈಟ್ ಗುರುವಾರ ಮೊಗಲ್ ಉದ್ಯಾನ ಹಾಗೂ ಅಮೃತ್ ಉದ್ಯಾನ್-ಹೀಗೆ ಎರಡೂ ಹೆಸರನ್ನು ಉಲ್ಲೇಖಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)