varthabharthi


ರಾಷ್ಟ್ರೀಯ

ತಮಿಳುನಾಡು: ‘ತುನಿವು’ ನಟ ರಮೇಶ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ವಾರ್ತಾ ಭಾರತಿ : 28 Jan, 2023

ಚೆನ್ನೈ, ಜ. 28: ನೃತ್ಯಪಟು, ನಟ ಹಾಗೂ ಸಾಮಾಜಿಕ ಮಾಧ್ಯಮದ ಸ್ಟಾರ್ ರಮೇಶ್(Ramesh) ಅವರು ಚೆನ್ನೈಯಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದ್ದಾರೆ. ಚೆನ್ನೈಯ ಪುಲಿನಥೊಪೆ ಸಮೀಪದ ಕೆ.ಪಿ. ಪಾರ್ಕ್ ನಲ್ಲಿರುವ ತಮಿಳುನಾಡು ಸ್ಲಮ್ ಬೋರ್ಡ್ ವಸತಿ ಸಂಕೀರ್ಣದ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಲ್ಲಿರುವ ನಿವಾಸದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಟಿಕ್ ಟಾಕ್ ಹಾಗೂ  ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನ್ಯತ್ಯದ ಚಲನೆಗೆ ಅವರು ದೊಡ್ಡ ಸಂಖ್ಯೆಯ ಬೆಂಬಲಿಗರನ್ನು ಹೊಂದಿದ್ದರು. ಇತ್ತೀಚೆಗೆ ಬಿಡುಗಡೆಯಾದ ಅಜಿತ್ ಕುಮಾರ್ ಅವರ ‘ತುನಿವು’ ಚಿತ್ರದಲ್ಲಿ ನಟಿಸಿದ್ದರು. ಈ ಕುರಿತು ಬೇಸಿನ್ ಬ್ರಿಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ತನಿಖೆ ಮುಂದುವರಿದಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)