ರಾಷ್ಟ್ರೀಯ
‘ವಂದೇ ಭಾರತ್ ಎಕ್ಸ್ ಪ್ರೆಸ್’ ರೈಲಿನ ಬೋಗಿಯಲ್ಲಿ ಕಸದ ರಾಶಿ: ಚಿತ್ರ ವೈರಲ್

PHOTO : Awanish Sharan\Twitter
ಹೊಸದಿಲ್ಲಿ, ಜ. 28: ‘ವಂದೇ ಭಾರತ್ ಎಕ್ಸ್ ಪ್ರೆಸ್’(Vande Bharat Express) ರೈಲಿನ ಬೋಗಿಯೊಂದರ ನೆಲದಲ್ಲಿ ಕಸ ಹರಡಿರುವುದನ್ನು ತೋರಿಸುವ ಚಿತ್ರವೊಂದು ವೈರಲ್ ಆಗಿದೆ.
ಐಪಿಎಸ್ ಅಧಿಕಾರಿ ಅವನೀಶ್ ಶರಣ್(Awanish Sharan) ಟ್ವಿಟರ್ ನಲ್ಲಿ ಹಾಕಿರುವ ಚಿತ್ರವು, ರೈಲಿನ ಒಳಗೆ ಖಾಲಿ ಬಾಟಲಿಗಳು, ಬಳಸಿದ ಆಹಾರದ ಪೊಟ್ಟಣಗಳು ಮತ್ತು ಪ್ಲಾಸ್ಟಿಕ್ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ತೋರಿಸಿದೆ. ನೆಲವನ್ನು ಸ್ವಚ್ಛಗೊಳಿಸಲು ಓರ್ವ ಕೆಲಸಗಾರ ಕೈಯಲ್ಲಿ ಪೊರಕೆ ಹಿಡಿದು ನಿಂತಿರುವುದೂ ಚಿತ್ರದಲ್ಲಿ ಕಾಣುತ್ತದೆ. ಚಿತ್ರಕ್ಕೆ ‘‘ವೀ ದ ಪೀಪಲ್’’(Wee the People) ಎಂಬ ಅಡಿಬರಹ ನೀಡಲಾಗಿದೆ.
ರೈಲಿನ ಒಳಗೆ ಕಸ ಚೆಲ್ಲಿರುವುದನ್ನು ಹಲವು ಟ್ವಿಟರ್ ಬಳಕೆದಾರರು ಖಂಡಿಸಿದ್ದಾರೆ.ಈ ತಿಂಗಳ ಆದಿಭಾಗದಲ್ಲಿ, ಸಿಕಂದರಾಬಾದ್-ವಿಶಾಖಪಟ್ಟಣಮ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕಸ ರಾಶಿಬಿದ್ದಿರುವುದು ಪತ್ತೆಯಾದ ಬಳಿಕ, ರೈಲುಗಳ ಒಳಗೆ ಸ್ವಚ್ಛತೆಯನ್ನು ಕಾಯ್ದುಕೊಳ್ಳುವಂತೆ ರೈಲ್ವೇಯು ಪ್ರಯಾಣಿಕರಿಗೆ ಮನವಿ ಮಾಡಿತ್ತು.
“We The People.”
— Awanish Sharan (@AwanishSharan) January 28, 2023
Pic: Vande Bharat Express pic.twitter.com/r1K6Yv0XIa
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ