ಅಂತಾರಾಷ್ಟ್ರೀಯ
ಟರ್ಕಿ- ಇರಾನ್ ಗಡಿಯಲ್ಲಿ ಪ್ರಬಲ ಭೂಕಂಪ: ಕನಿಷ್ಠ ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Photo: PTI
ಟೆಹ್ರಾನ್: ವಾಯವ್ಯ ಇರಾನ್‌ನ ಟರ್ಕಿ ಗಡಿಯಲ್ಲಿ ಶನಿವಾರ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ. ಈ ವಿಕೋಪದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
"ಖೋಯ್ ನಗರದಲ್ಲಿ 122 ಮಂದಿ ಗಾಯಗೊಂಡಿದ್ದಾರೆ.. ದುರದೃಷ್ಟವಶಾತ್ ಇಬ್ಬರು ಮೃತಪಟ್ಟಿದ್ದಾರೆ" ಎಂದು ತುರ್ತು ಸೇವೆಗಳ ವಕ್ತಾರ ಮೊಜ್ತಾಬಾ ಖಲೇದಿ ಸರ್ಕಾರಿ ಟೆಲಿವಿಷನ್‌ಗೆ ಮಾಹಿತಿ ನೀಡಿದ್ದಾರೆ.
ಇರಾನ್‌ನ ಪಶ್ಚಿಮ ಅಜೆರ್‌ಬೈಜಾನ್ ಪ್ರದೇಶಕ್ಕೆ ಪರಿಹಾರ ತಂಡಗಳನ್ನು ಕಳುಹಿಸಿಕೊಡಲಾಗಿದ್ದು, ಆಸ್ಪತ್ರೆಗಳಿಗೆ ಮುನ್ಸೂಚನೆ ನೀಡಲಾಗಿದೆ ಎಂದು ಇರಾನ್ನ ತುರ್ತುಸೇವೆಗಳ ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪ ಪೀಡಿತ ಪ್ರದೇಶಗಳಲ್ಲಿ ವ್ಯಾಪಕ ಹಿಮಪಾತ ಹಾಗೂ ಚಳಿಯ ವಾತಾವರಣ ಇದೆ. ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತದ ಪ್ರಕರಣಗಳೂ ವರದಿಯಾಗಿವೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ