varthabharthi


ರಾಷ್ಟ್ರೀಯ

ಬಿಬಿಸಿ ಸಾಕ್ಷ್ಯಚಿತ್ರ ವಿವಾದ: ಒಡಕು ಮೂಡಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದ ಪ್ರಧಾನಿ

ವಾರ್ತಾ ಭಾರತಿ : 29 Jan, 2023

Photo: PTI

ಹೊಸದಿಲ್ಲಿ: ದೇಶದಲ್ಲಿ ಭಿನ್ನಾಭಿಪ್ರಾಯಗಳನ್ನು ಬಿತ್ತುವ ಹಾಗೂ  ಒಡಕು ಮೂಡಿಸುವ ಪ್ರಯತ್ನಗಳ ವಿರುದ್ಧ ಶನಿವಾರ ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅಂತಹ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ದಿಲ್ಲಿ ಕಂಟೋನ್ಮೆಂಟ್‌ನ ಕಾರ್ಯಪ್ಪ ಮೈದಾನದಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತವು ಭವ್ಯತೆಯನ್ನು ಸಾಧಿಸಲು ಏಕತೆಯ ಮಂತ್ರವೊಂದೇ ಮಾರ್ಗವಾಗಿದೆ ಎಂದು ಹೇಳಿದರು.

"ದೇಶ ಒಡೆಯಲು ಹಲವಾರು ನೆಪಗಳನ್ನು ಎತ್ತಲಾಗುತ್ತಿದೆ. ಭಾರತಮಾತೆಯ ಮಕ್ಕಳ ನಡುವೆ ಒಡಕು ಮೂಡಿಸಲು ಹಲವಾರು ವಿಚಾರಗಳನ್ನು ಎತ್ತಲಾಗುತ್ತಿದೆ. ಇಂತಹ ಪ್ರಯತ್ನಗಳ ಹೊರತಾಗಿಯೂ ಭಾರತದ ಜನರಲ್ಲಿ ಎಂದಿಗೂ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲ" ಎಂದು ಪ್ರಧಾನಿ ಹೇಳಿದರು.

2002ರ ಗುಜರಾತ್ ಗಲಭೆಯ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ವಿವಾದದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ   ಈ ಹೇಳಿಕೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)