varthabharthi


ರಾಷ್ಟ್ರೀಯ

ಪಶ್ಚಿಮಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಿಟಿಷ್ ,ಮೊಘಲ್ ಹೆಸರು ತೆಗೆದುಹಾಕುತ್ತೇವೆ: ಸುವೇಂದು ಅಧಿಕಾರಿ

ವಾರ್ತಾ ಭಾರತಿ : 29 Jan, 2023

Photo:PTI

ಕೋಲ್ಕತ್ತಾ: ಮೊಘಲರ ಹೆಸರಿನ ಸ್ಥಳಗಳನ್ನು ಗುರುತಿಸಿ ಮರುನಾಮಕರಣ ಮಾಡಬೇಕು. ಪಶ್ಚಿಮಬಂಗಾಳದಲ್ಲಿ ನಾವು ಅಧಿಕಾರಕ್ಕೆ ಬಂದರೆ   ಬ್ರಿಟಿಷ್ ಹಾಗೂ  ಮೊಘಲ್ ಹೆಸರುಗಳನ್ನು ತೆಗೆದುಹಾಕುತ್ತೇವೆ ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಶನಿವಾರ ಹೇಳಿದ್ದಾರೆ.

ಮೊಘಲ್ ಗಾರ್ಡನ್ ಸೇರಿದಂತೆ ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿರುವ ಉದ್ಯಾನಗಳಿಗೆ 'ಅಮೃತ್ ಉದ್ಯಾನ್' ಎಂಬ ಹೆಸರನ್ನು ನೀಡಿರುವ ಹಿನ್ನಲೆಯಲ್ಲಿ  ಬಿಜೆಪಿ ನಾಯಕ ಈ  ಹೇಳಿಕೆ ನೀಡಿದ್ದಾರೆ

"ಅವರು (ಮೊಘಲರು) ಹಲವಾರು ಹಿಂದೂಗಳನ್ನು ಕೊಂದಿದ್ದಾರೆ ಹಾಗೂ  ದೇವಾಲಯಗಳನ್ನು ನಾಶಪಡಿಸಿದ್ದಾರೆ. ಅವರ ಹೆಸರಿನ ಎಲ್ಲಾ ಸ್ಥಳಗಳನ್ನು ಗುರುತಿಸಬೇಕು ಹಾಗೂ ಅದನ್ನು  ಮರುನಾಮಕರಣ ಮಾಡಬೇಕು. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನಾವು ಒಂದು ವಾರದೊಳಗೆ ಎಲ್ಲಾ ಬ್ರಿಟಿಷ್ ಹಾಗೂ  ಮೊಘಲ್ ಹೆಸರುಗಳನ್ನು ತೆಗೆದುಹಾಕುತ್ತೇವೆ" ಎಂದು ಸುವೇಂದು ಅಧಿಕಾರಿ ANI ಗೆ ತಿಳಿಸಿದರು.

ರಾಷ್ಟ್ರಪತಿ ಭವನದ ಉದ್ಯಾನಗಳಿಗೆ  ಅಮೃತ್ ಉದ್ಯಾನ  ಹೆಸರನ್ನು ಇಟ್ಟಿರುವ ಕ್ರಮವನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಸ್ವಾಗತಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)