varthabharthi


ರಾಷ್ಟ್ರೀಯ

ವಿಷ ಸೇವಿಸಿದ್ದ ಕಾಂಗ್ರೆಸ್ ಕೌನ್ಸಿಲರ್ ಮೃತ್ಯು: ಆತ್ಮಹತ್ಯೆ ಚೀಟಿಯಲ್ಲಿ ಬಿಜೆಪಿ ಮಾಜಿ ಶಾಸಕನ ಹೆಸರು

ವಾರ್ತಾ ಭಾರತಿ : 29 Jan, 2023

Sushil Kalia, Photo: Facebook

ಚಂಡಿಗಡ:  ವಿಷಕಾರಿ ಪದಾರ್ಥವನ್ನು ಸೇವಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ  ಕಾಂಗ್ರೆಸ್ ಕೌನ್ಸಿಲರ್ ಸುಶೀಲ್ ಕಾಲಿಯಾ ಅಲಿಯಾಸ್ ವಿಕ್ಕಿ (Congress councillor Sushil Kalia alias Vicky ) ಅವರು ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಸುಶೀಲ್ ಕಾಲಿಯಾ ಅವರು, ತಮ್ಮ ಮಗ ಹಾಗೂ  ಇತರ 18 ಮಂದಿಯ ವಿರುದ್ಧ ಅನುದಾನ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಎಫ್‌ಐಆರ್ ದಾಖಲಾದ ನಂತರ ಸಾಕಷ್ಟು ಚಿಂತೆಗೀಡಾದ ಕಾರಣ  ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಹಿಂದಿಯಲ್ಲಿ ಬರೆದ ಎರಡು ಪುಟಗಳ ಆತ್ಮಹತ್ಯಾ ನೋಟ್ ನಲ್ಲಿ, ವಾರ್ಡ್ ಸಂಖ್ಯೆ 64 ರ ಕಾಂಗ್ರೆಸ್ ಕೌನ್ಸಿಲರ್ ಕಾಲಿಯಾ ಅವರು ತನ್ನ ಆತ್ಮಹತ್ಯೆಗೆ ಬಿಜೆಪಿಯ ಮಾಜಿ ಶಾಸಕ ಕೆ.ಡಿ .ಭಂಡಾರಿ ಮತ್ತು ಇನ್ನೂ ಆರು ಜನರನ್ನು (ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ) ದೂಷಿಸಿದ್ದಾರೆ.

ಶಾಸಕ ಬಾವಾ ಹೆನ್ರಿ, ಅವರ ಪುತ್ರ ಅಂಶುಮಾನ್ ಹಾಗೂ ಸಂಬಂಧಿಕರ ಆಪ್ತರಾಗಿದ್ದ ಸುಶೀಲ್ ಕಾಲಿಯಾ ವಿರುದ್ಧ ಕಳೆದ ವರ್ಷ ಪೊಲೀಸರು ಭ್ರಷ್ಟಾಚಾರ ಪ್ರಕರಣ ದಾಖಲಿಸಿದ್ದರು. ಸುಶೀಲ್ ಕಾಲಿಯಾ ಹಾಗೂ  ಅವರ ಕುಟುಂಬ ಸದಸ್ಯರು ಶಾಸಕರ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಸುಶೀಲ್ ಕಾಲಿಯಾ ಅವರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದರು, ಆದರೆ ಅವರ ಮಗನಿಗೆ ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿರಲಿಲ್ಲ. ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು, ಆದರೆ ಮತ್ತೆ ನ್ಯಾಯಾಲಯದಿಂದ ಜಾಮೀನು ಲಭಿಸಿರಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)