ರಾಷ್ಟ್ರೀಯ
ಗುಂಡೇಟಿಗೊಳಗಾಗಿದ್ದ ಒಡಿಶಾ ಸಚಿವ ಆಸ್ಪತ್ರೆಯಲ್ಲಿ ಮೃತ್ಯು
ವಾರ್ತಾ ಭಾರತಿ : 29 Jan, 2023

Photo: PTI
ಭುವನೇಶ್ವರ: ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನಬಾ ಕಿಶೋರ್ ದಾಸ್ ಅವರು ರವಿವಾರ ಬುಲೆಟ್ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ, ದಾಸ್ ಅವರು ತಮ್ಮ ಕಾರಿನಿಂದ ಇಳಿಯುವ ವೇಳೆ ಪೊಲೀಸ್ ಅಧಿಕಾರಿಯೋರ್ವರು ಗುಂಡು ಹಾರಿಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು.
"ಗಾಯಗಳನ್ನು ಸರಿಪಡಿಸಲು ಮತ್ತು ಹೃದಯದ ಪಂಪ್ ಅನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಅವರಿಗೆ ತುರ್ತು ಐಸಿಯು ಆರೈಕೆಯನ್ನು ನೀಡಲಾಯಿತು. ಆದರೆ, ಪ್ರಯತ್ನಗಳ ಹೊರತಾಗಿಯೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಮತ್ತು ಗಾಯಗಳಿಂದ ಸಾವನ್ನಪ್ಪಿದರು," ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)