varthabharthi


ರಾಷ್ಟ್ರೀಯ

ಮೋದಿ ಕುರಿತ ಬಿಬಿಸಿ ಸಾಕ್ಷಚಿತ್ರ ನಿರ್ಬಂಧಿಸಿದ ಕೇಂದ್ರ ಸರಕಾರದ ವಿರುದ್ಧ ಸುಪ್ರೀಂ ಗೆ ಪಿಐಎಲ್‌

ವಾರ್ತಾ ಭಾರತಿ : 29 Jan, 2023

PHOTO : PTI 

ಹೊಸದಿಲ್ಲಿ, ಜ. 29: ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿ ಅವರ ಪಾತ್ರದ ಕುರಿತ ಬಿಬಿಸಿ (BBC) ಸಾಕ್ಷಚಿತ್ರ ಪ್ರದರ್ಶನ ನಿರ್ಬಂಧಿಸಿದ ಕೇಂದ್ರ ಸರಕಾರ(Central Govt)ದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗಿದೆ.

ಕೇಂದ್ರ ಸರಕಾರದ ನಿರ್ಧಾರ ದುರುದ್ದೇಶದಿಂದ ಕೂಡಿದೆ. ನಿರಂಕುಶ ಹಾಗೂ ಅಸಾಂ ವಿಧಾನಿಕವಾಗಿದೆ. ಆದುದರಿಂದ ಈ ಆದೇಶವನ್ನು ರದ್ದುಪಡಿಸಬೇಕು ಎಂದು ನ್ಯಾಯವಾದಿ ಎಂ.ಎಲ್. ಶರ್ಮಾ(M.L Sharma) ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಪ್ರತಿಪಾದಿಸಿದ್ದಾರೆ. ಕೇಂದ್ರ ಸರಕಾರ ಮಾಹಿತಿ ಹಾಗೂ ತಂತ್ರಜ್ಞಾನ ಕಾಯ್ದೆ-2021ರ ಅಡಿಯ ತುರ್ತು ಅಧಿಕಾರವನ್ನು ಬಳಸಿ ಜನವರಿ 20ರಂದು ‘‘ಇಂಡಿಯಾ: ದಿ ಮೋದಿ ಕ್ವಶ್ಚನ್’’(India: The Modi Question) ಸಾಕ್ಷಚಿತ್ರ ಹಾಗೂ ಅದರ ತುಣುಕುಗಳನ್ನು ಪ್ರದರ್ಶಿಸದಂತೆ ಯುಟ್ಯೂಬ್ ಹಾಗೂ ಟ್ವಿಟರ್ಗೆ ಆದೇಶ ನೀಡಿತ್ತು. ಸಂವಿಧಾನ ಪರಿಚ್ಛೇದ 19 (1)(ಎ) ಅಡಿಯಲ್ಲಿ ಬರುವ ಮೂಲಭೂತ ಹಕ್ಕಾದ ಪತ್ರಿಕಾ ಸ್ವಾತಂತ್ರವನ್ನು ಕೇಂದ್ರ ಸರಕಾರ ಮೊಟಕುಗೊಳಿಸಬಹುದೇ ಎಂದು ಶರ್ಮಾ ಅವರು ತನ್ನ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)