ರಾಷ್ಟ್ರೀಯ
ಹಕ್ಕಿ ಢಿಕ್ಕಿ : ಏರ್ ಏಷಿಯಾ ವಿಮಾನ ತುರ್ತು ಭೂಸ್ಪರ್ಶ
ವಾರ್ತಾ ಭಾರತಿ : 29 Jan, 2023

PHOTO : PTI
ಲಕ್ನೋ, ಜ. 29: ಹಾರಾಟ ಆರಂಭಿಸಿದ ಕೂಡಲೇ ಹಕ್ಕಿಯೊಂದು ಢಿಕ್ಕಿಯಾದ ಹಿನ್ನೆಲೆಯಲ್ಲಿ ಕೋಲ್ಕತ್ತಾ(Kolkata)ಕ್ಕೆ ತೆರಳುತ್ತಿದ್ದ ಏರ್ ಏಷಿಯಾ ವಿಮಾನ (Air Asia flight) ಲಕ್ನೋ ವಿಮಾನ ನಿಲ್ದಾಣದಲ್ಲಿ ರವಿವಾರ ತುರ್ತು ಭೂಸ್ಪರ್ಶ ಮಾಡಿತು.
ಅನಂತರ ಏರ್ ಏಷಿಯಾ ವಿಮಾನ ಯಾನ ಸಂಸ್ಥೆ ಇನ್ನೊಂದು ವಿಮಾನವನ್ನು ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಕಳುಹಿಸಿಕೊಟ್ಟಿತು.
ಇದೇ ರೀತಿಯ ಘಟನೆ ಕಳೆದ ವರ್ಷ ಸಂಭವಿಸಿತ್ತು. ಅಹ್ಮದಾಬಾದ್ನಿಂದ ಹೊಸದಿಲ್ಲಿಗೆ ತೆರಳುತ್ತಿದ್ದ ಆಕಾಶ್ ವಿಮಾನಕ್ಕೆ ಹಕ್ಕಿ ಢಿಕ್ಕಿ ಹೊಡೆದಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿತ್ತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)