varthabharthi


ರಾಷ್ಟ್ರೀಯ

ಚೀನಾದ ಅತಿಕ್ರಮಣವನ್ನು ನಿರಾಕರಿಸುವ ಕೇಂದ್ರದ ನಿಲುವು ಅಪಾಯಕಾರಿ: ರಾಹುಲ್

ವಾರ್ತಾ ಭಾರತಿ : 29 Jan, 2023

PHOTO : PTI 

ಹೊಸದಿಲ್ಲಿ,ಜ.29: ಚೀನಾದ ಆಕ್ರಮಣಕಾರಿ ನೀತಿಯ ಕುರಿತು ಕಾಂಗ್ರೆಸ್ ನ ರಾಹುಲ್ ಗಾಂಧಿ(Rahul Gandhi) ರವಿವಾರ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಲಡಾಕ್ ನಲ್ಲಿ ಭಾರತಕ್ಕೆ ಸೇರಿದ 2 ಸಾವಿರ ಚದರ ಕಿ.ಮೀ. ಭೂಪ್ರದೇಶವನ್ನು ಚೀನಾ(China) ಅತಿಕ್ರಮಿಸಿದೆ ಎಂದವರು ಹೇಳಿದ್ದಾರೆ. 

ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ‘‘ ಚೀನಿಯವರು ನಮ್ಮ ನೆಲವನ್ನು ವಶಪಡಿಸಿಕೊಂಡಿದ್ದಾರೆಂಬುದನ್ನು ನಿರಾಕರಿಸುವ ಕೇಂದ್ರ ಸರಕಾರದ ನಿಲುವು ಅತ್ಯಂತ ಅಪಾಯಕಾರಿಯಾಗಿದೆ. ಇದರಿಂದಾಗಿ ಅವರಿಗೆ(ಚೀನಿಯರು) ಇನ್ನಷ್ಟು ಆಕ್ರಮಣಕಾರಿಯಾಗಿ ವರ್ತಿಸಲು ಆತ್ಮವಿಶ್ವಾಸ ದೊರೆಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
 
‘‘ ಚೀನಿಯರೊಂದಿಗೆ ಅತ್ಯಂತ ಕಠಿಣವಾಗಿ ವ್ಯವಹರಿಸಬೇಕಾಗಿದೆ ಹಾಗೂ ನಮ್ಮ ನೆಲದಲ್ಲಿ ಅವರು ಕುಳಿತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲವೆಂಬುದನ್ನು ನಾವು ಅವರಿಗೆ ಸ್ಪಷ್ಟಪಡಿಸಬೇಕಾಗಿದೆ’’ ಎಂದರು. ಚೀನಿಯರು ಭಾರತದಿಂದ ಯಾವುದೇ ಭೂಮಿಯನ್ನು ಕಸಿದುಕೊಂಡಿಲ್ಲವೆಂಬ ಭಾವನೆಯನ್ನು ಭಾರತದಲ್ಲಿ ಮೂಡಿಸಲಾಗುತ್ತಿದೆಯೆಂದು ರಾಹುಲ್ ಹೇಳಿದರು.

‘‘ನಾನು ತೀರಾ ಇತ್ತೀಚೆಗೆ ಕೆಲವು ನಿವೃತ್ತ ಸೇನಾಧಿಕಾರಿಗಳು ಹಾಗೂ ಲಡಾಖ್ನ ನಿಯೋಗವೊಂದನ್ನು ಭೇಟಿಯಾಗಿದದೆ. ಚೀನಿಯರು 2 ಸಾವಿರ ಚ.ಕಿ.ಮೀ. ವಿಸ್ತೀರ್ಣದ ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿಕೊಂಡಿದ್ದಾರೆಂದು ಅವರು ನನಗೆ ಸ್ಪಷ್ಟವಾಗಿ ಹೇಳಿದ್ದಾರೆ. ಭಾರತೀಯ ಪ್ರಾಂತದಲ್ಲಿ ಹಲವಾರು ಗಸ್ತು ಕೇಂದ್ರಗಳು ಕೂಡಾ ಚೀನಿಯರ ಕೈಯಲ್ಲಿವೆ ಎಂಬುದಾಗಿಯೂ ಅವರು ನನಗೆ ತಿಳಿಸಿದ್ದಾರೆಂದು ರಾಹುಲ್ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)