varthabharthi


ರಾಷ್ಟ್ರೀಯ

ಗಣರಾಜ್ಯೋತ್ಸವದ ಸಮೀಕ್ಷೆಯಲ್ಲಿ ಅಕ್ಷರ ತಪ್ಪು: ತರೂರ್ ರಿಂದ ‘ಹಿಂದಿ ರಾಷ್ಟ್ರವಾದಿ’ಗಳಿಗೆ ತರಾಟೆ

ವಾರ್ತಾ ಭಾರತಿ : 29 Jan, 2023

ಹೊಸದಿಲ್ಲಿ, ಜ. 29: ಸರಕಾರದ ವೆಬ್ ಸೈಟ್‌ mygov.in ನಡೆಸಿದ ಗಣರಾಜ್ಯೋತ್ಸವ ದಿನ(Republic Day)ದ ಸಮೀಕ್ಷೆಯ ಸ್ಕ್ರೀನ್ ಶಾಟ್ ಅನ್ನು ರವಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor), ಕೇರಳ ಹಾಗೂ ತಮಿಳುನಾಡು ಹೆಸರಲ್ಲಿದ್ದ ಅಕ್ಷರ ತಪ್ಪಿನ ಬಗ್ಗೆ ಗಮನ ಸೆಳೆದಿದ್ದಾರೆ.

ದಕ್ಷಿಣ ಭಾರತೀಯರ ಪರವಾಗಿ ಮಾತನಾಡಿರುವ ತಿರುವನಂತಪುರದ ಸಂಸದ ಶಶಿ ತರೂರ್, ‘‘mygov.in ವೆಬ್ಸೈಟ್ ನಡೆಸುತ್ತಿರುವ ಹಿಂದಿ ರಾಷ್ಟ್ರವಾದಿಗಳು ನಮ್ಮ ರಾಜ್ಯಗಳ ಹೆಸರನ್ನು ಕಲಿಯುವ ತೊಂದರೆ ತೆಗೆದುಕೊಂಡರೆ ದಕ್ಷಿಣ ಭಾರತವಾಸಿಗಳಾದ ನಾವೆಲ್ಲರೂ ಕೃತಜ್ಞರಾಗುತ್ತೇವೆ. ದಯವಿಟ್ಟು ಕಲಿಯಿರಿ’’ ಎಂದು ಹೇಳಿದ್ದಾರೆ. ಆದರೆ, ಅನಂತರ ಈ ಅಕ್ಷರ ತಪ್ಪುಗಳನ್ನು ಸರಿಪಡಿಸಲಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)