ಕರ್ನಾಟಕ
ಬಸ್ ನಿಲ್ಲಿಸಿ ಕೆರೆಗೆ ಧುಮುಕಿ ಮುಳುಗುತ್ತಿದ್ದ ಇಬ್ಬರ ಜೀವ ಉಳಿಸಿದ ಕೆಎಸ್ಸಾರ್ಟಿಸಿ ಚಾಲಕ
ವಾರ್ತಾ ಭಾರತಿ : 29 Jan, 2023

ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾ-ನಾಗಪ್ಪನಹಳ್ಳಿ ಗೇಟ್ ಮಾರ್ಗದಲ್ಲಿ ಕೆಎಸ್ಸಾರ್ಟಿಸಿ ಬಸ್ ಚಲಿಸುತ್ತಿದ್ದ ಚಾಲಕ ಎಂ.ಮಂಜುನಾಥ, ಹಂದಿಕುಂಟೆ ಅಗ್ರಹಾರದ ಬಳಿ ಇಬ್ಬರು ಹೆಣ್ಣು ಮಕ್ಕಳು ಕೆರೆಯಲ್ಲಿ ಮುಳುಗುತ್ತಿರುವುದನ್ನು ಕಂಡು, ಕೂಡಲೇ ಬಸ್ ನಿಲ್ಲಿಸಿ ಕೆರೆಗೆ ಧುಮುಕಿ ಇಬ್ಬರ ಪ್ರಾಣವನ್ನು ಉಳಿಸಿರುವ ಘಟನೆ ರವಿವಾರ ನಡೆದಿದೆ.
ಚಾಲಕನ ಸಮಯ ಪ್ರಜ್ಞೆಯಿಂದ ಇಬ್ಬರ ಜೀವ ಉಳಿದಿದ್ದು, ನಮ್ಮ ಚಾಲನಾ ಸಿಬ್ಬಂದಿಗಳ ಈ ಕಾರ್ಯತತ್ಪರತೆ ಸಂಸ್ಥೆಗೆ ಹೆಮ್ಮೆ ಮತ್ತು ಗೌರವ ತಂದಿದೆ ಎಂದು ಮಂಜುನಾಥ್ ಅವರ ಮಾನವೀಯ ಕಾರ್ಯಕ್ಕೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)