ರಾಷ್ಟ್ರೀಯ
ಪಾಕಿಸ್ತಾನದಲ್ಲಿ ಹಣದುಬ್ಬರ: ಪೆಟ್ರೋಲ್ ದರದಲ್ಲಿ 35 ರೂ. ಏರಿಕೆ

PHOTO ; NDTV
ಇಸ್ಲಾಮಾಬಾದ್: ಪಾಕಿಸ್ತಾನ(Pakistan)ದಲ್ಲಿ ಆರ್ಥಿಕ ಬಿಕ್ಕಟ್ಟು ವಿಪರೀತವಾಗಿದ್ದು, ಪಾಕಿಸ್ತಾನ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್(Petrol and Diesel) ಬೆಲೆಯಲ್ಲಿ 35 ರೂಪಾಯಿ (ಪಾಕ್ ಕರೆನ್ಸಿ) ಹೆಚ್ಚಿಸಿರುವುದಾಗಿ ರವಿವಾರ ಘೋಷಿಸಿದೆ ಎಂದು dawn.com ವರದಿ ಮಾಡಿದೆ.
ಪೆಟ್ರೋಲ್ ಬೆಲೆ ಲೀಟರ್‌ಗೆ (ಸ್ಥಳೀಯ ಕರೆನ್ಸಿ) 249.80 ರೂ ಆಗಿದ್ದು, ಹೈ ಸ್ಪೀಡ್ ಡೀಸೆಲ್ ಬೆಲೆ ಲೀಟರ್‌ಗೆ 262.80 ರೂ ತಲುಪಿದೆ. ಸೀಮೆ ಎಣ್ಣೆ(Kerosene oil) ಲೀಟರ್‌ಗೆ 189.83 ರೂ ಮತ್ತು ಲಘು ಡೀಸೆಲ್ ತೈಲ ಲೀಟರ್‌ಗೆ 187 ರೂ ತಲುಪಿದೆ ಎಂದು ವರದಿಯಾಗಿದೆ.
"ಕಳೆದ ವಾರ ಪಾಕಿಸ್ತಾನಿ ರೂಪಾಯಿ ಅಪಮೌಲ್ಯವನ್ನು ಕಂಡಿದೆ. ಈಗ ನಾವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ 11% ಹೆಚ್ಚಳವನ್ನು ಮಾಡುತ್ತಿದ್ದೇವೆ" ಎಂದು ಹಣಕಾಸು ಸಚಿವ ಇಶಾಕ್ ದಾರ್ ಹೇಳಿದರು.
ಜನವರಿ 19 ರಂದು, ಪಾಕಿಸ್ತಾನದ ಕರೆನ್ಸಿ ಯುಎಸ್ ಡಾಲರ್ ವಿರುದ್ಧ ದಾಖಲೆಯ ಮಟ್ಟಕ್ಕೆ ಕುಸಿದಿದ್ದು, ಒಂದು ಡಾಲರ್‌ಗೆ 255.43 ಪಾಕ್ ರೂ. ತಲುಪಿದೆ.
ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರದ ಶಿಫಾರಸ್ಸಿನ ಮೇರೆಗೆ ಆರ್‌ಪಿಸಿಗಳನ್ನು ಹೆಚ್ಚಿಸಲಾಗಿದೆ ಎಂದು ಸಚಿವರು ಹೇಳಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ