varthabharthi


ಬೆಂಗಳೂರು

ಬೆಂಗಳೂರು: ಪಿಎಸ್ಸೈ ಸಮವಸ್ತ್ರ ಧರಿಸಿ ಉದ್ಯಮಿಯಿಂದ 80 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪಿಗಳ ಬಂಧನ

ವಾರ್ತಾ ಭಾರತಿ : 29 Jan, 2023

ಸಾಂದರ್ಭಿಕ ಚಿತ್ರ

ಬೆಂಗಳೂರು: ಪಿಎಸ್ಸೈ ಸಮವಸ್ತ್ರ ಧರಿಸಿ ಅಡಿಕೆ ಉದ್ಯಮಿಯಿಂದ 80 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪ ಪ್ರಕರಣ ಮೂವರನ್ನು ಇಲ್ಲಿನ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಡಪ ಜಿಲ್ಲೆಯ ಭತಲ್ ಶಿವರಾಮ ಕೃಷ್ಣ ಯಾದವ್ (19), ಲಾಲ್ ಬಾಷಾ (36), ಝಾಕೀರ್ (27) ಬಂಧಿತ ಆರೋಪಿಗಳಾಗಿದ್ದು, ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

ಡಿಸೆಂಬರ್ 27ರಂದು ಮಧ್ಯಾಹ್ನ ಶಾಂತಿನಗರದ ಕೆ.ಎಚ್.ರಸ್ತೆಯ ಬಳಿ ಕಾರಿನಲ್ಲಿ ತೆರಳುತ್ತಿದ್ದ ಕುಮಾರಸ್ವಾಮಿ ಹಾಗೂ ಚಂದನ್ ಎಂಬುವವರನ್ನು ಪೊಲೀಸರ ಸೋಗಿನಲ್ಲಿ ಅಡ್ಡಗಟ್ಟಿ, ಅಡಿಕೆ ವ್ಯಾಪಾರಕ್ಕಾಗಿ ಇರಿಸಿದ್ದ 80 ಲಕ್ಷಹಣ ದರೋಡೆಮಾಡಿ ಆರೋಪಿಗಳು ಪರಾರಿಯಾಗಿದ್ದರು.

ಹಣ ಕಳೆದುಕೊಂಡ ಕುಮಾರಸ್ವಾಮಿ ಹಾಗೂ ಚಂದನ್ ನೀಡಿದ್ದ ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು, ಮೂವರನ್ನು ಬಂಧಿಸಿ 37 ಲಕ್ಷ ರೂ. ಜಪ್ತಿ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)