varthabharthi


ಬಜೆಟ್ - 2023

ಸತತ ಐದನೇ ಬಜೆಟ್ ಮಂಡಿಸಲು ಸಂಸತ್ತಿಗೆ ಆಗಮಿಸಿದ ನಿರ್ಮಲಾ ಸೀತಾರಾಮನ್

ವಾರ್ತಾ ಭಾರತಿ : 1 Feb, 2023

Photo:PTI

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಇಂದು ತಮ್ಮ ಸತತ ಐದನೇ ಬಜೆಟ್ ಮಂಡಿಸಲು ಸಂಸತ್ತಿಗೆ ಆಗಮಿಸಿದ್ದಾರೆ.

ಸಂಸತ್ತಿನಲ್ಲಿ ಬೆಳಗ್ಗೆ 10 ಗಂಟೆಗೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಸೀತಾರಾಮನ್ ಅವರು 2023ರ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ.

ಕೇಂದ್ರ ಬಜೆಟ್ 2023-24 ಅನ್ನು ಹಿಂದಿನ ಎರಡು ವರ್ಷಗಳಂತೆಯೇ ಕಾಗದ ರಹಿತ ವಾಗಿ ಮಂಡಿಸಲು ಬುದವಾರ ಸಂಸತ್ತಿಗೆ ತೆರಳುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೆ ಸಾಂಪ್ರದಾಯಿಕ 'ಬಹಿ-ಖಾತಾ' ಶೈಲಿಯ ಕೆಂಪು ಚೀಲದಲ್ಲಿ ಡಿಜಿಟಲ್ ಟ್ಯಾಬ್ಲೆಟ್ ಅನ್ನು ತೆಗೆದುಕೊಂಡು ಬಂದಿದ್ದಾರೆ. ಈ ಬಾರಿ ಬಜೆಟ್ ಅನ್ನು ಡಿಜಿಟಲ್ ರೂಪದಲ್ಲಿ ಪ್ರಸ್ತುತಪಡಿಸಲಿದ್ದಾರೆ.

2019 ರಲ್ಲಿ ಕೇಂದ್ರ  ಬಜೆಟ್ ಅನ್ನು ಚರ್ಮದ ಬ್ರೀಫ್ ಕೇಸ್ ಬದಲಿಗೆ ಸಾಂಪ್ರದಾಯಿಕ 'ಬಹಿ-ಖಾತಾ'ದಲ್ಲಿ ಮಂಡಿಸಲಾಯಿತು. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಹಣಕಾಸು ಸಚಿವರು ಬ್ರೀಫ್‌ಕೇಸ್ ಇಲ್ಲದೆ  ಬಜೆಟ್ ಮಂಡಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)