ಬಜೆಟ್ - 2023
ಬಡ ಕೈದಿಗಳಿಗೆ ದಂಡ, ಜಾಮೀನು ಮೊತ್ತ ಪಾವತಿಸಲು ಆರ್ಥಿಕ ಬೆಂಬಲ ನೀಡಲಿರುವ ಸರಕಾರ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದಂಡ ಹಾಗೂ ಜಾಮೀನು ಮೊತ್ತಗಳನ್ನು ಪಾವತಿಸಲು ಅಸಮರ್ಥರಾಗಿರುವ ಬಡ ಕೈದಿಗಳಿಗೆ ಸರ್ಕಾರ ಆರ್ಥಿಕ ಬೆಂಬಲವೊದಗಿಸಲಾಗುವುದು ಎಂದು ಇಂದು ಕೇಂದ್ರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಜೈಲುಗಳಲ್ಲಿ ದೀರ್ಘ ಕಾಲದಿಂದ ಉಳಿದಿರುವ ವಿಚಾರಾಣಾಧಿನ ಕೈದಿಗಳ ಬಿಡುಗಡೆಗೆ ಕಾನೂನಿನ ಅನುಸಾರ ಮತ್ತು ಮಾನವೀಯ ನೆಲೆಯಲ್ಲಿ ಆದ್ಯತೆ ನೀಡಬೇಕೆಂದು ಕಳೆದ ವಾರ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟುಗಳ ನ್ಯಾಯಮೂರ್ತಿಗಳ ಜಂಟಿ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು.
"ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿಯೊಂದಿದೆ. ಈ ಸಮಿತಿಯು ಇಂತಹ ಪ್ರಕರಣಗಳನ್ನು ಪರಿಶೀಲಿಸಬಹುದು ಹಾಗೂ ಸಾಧ್ಯವಿರುವಲ್ಲಿ, ಕೈದಿಗಳು ಜಾಮೀನಿನ ಮೇಲೆ ಬಿಡುಗಡೆಯಾಗುವಂತೆ ಮಾಡಬಹುದು," ಎಂದು ಪ್ರಧಾನಿ ಹೇಳಿದ್ದರು.
ಇದನ್ನೂ ಓದಿ: ಕೇಂದ್ರ ಬಜೆಟ್: ಹೊಸ ತೆರಿಗೆ ಪದ್ದತಿಯಲ್ಲಿ 7ಲಕ್ಷ ದವರೆಗೆ ತೆರಿಗೆ ವಿನಾಯಿತಿ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ