varthabharthi


ಬಜೆಟ್ - 2023

ಬಜೆಟ್‌ ಭಾಷಣದಲ್ಲಿ‌ ಬಾಯ್ತಪ್ಪಿ ʻಪೊಲ್ಯೂಟಿಂಗ್‌ʼ ಬದಲು ʻಪೊಲಿಟಿಕಲ್‌ʼ ಎಂದ ನಿರ್ಮಲಾ ಸೀತಾರಾಮನ್!

ವಾರ್ತಾ ಭಾರತಿ : 1 Feb, 2023

Photo: PTI

ಹೊಸದಿಲ್ಲಿ: ಇಂದು ಲೋಕಸಭೆಯಲ್ಲಿ ತಮ್ಮ ಬಜೆಟ್‌ ಭಾಷಣದ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಾಯ್ತಪ್ಪಿ ʻರಾಜಕೀಯʼ ಪ್ರಮಾದವೊಂದನ್ನು ಮಾಡಿ ಬಿಟ್ಟರು. ತಮ್ಮ ಭಾಷಣದಲ್ಲಿ ʻಪೊಲ್ಯೂಟಿಂಗ್‌ʼ (ಮಾಲಿನ್ಯ ಉಂಟು ಮಾಡುವ) ಎಂದು ಹೇಳುವ ಬದಲು ʼಪೊಲಿಟಿಕಲ್ʼ (ರಾಜಕೀಯ) ಎಂಬ ಪದವನ್ನು ಸಚಿವೆ ಬಾಯ್ತಪ್ಪಿ ಬಳಸಿದ್ದು ಸದನದಲ್ಲಿ ಆಡಳಿತ ಪಕ್ಷಗಳ ಸದಸ್ಯರು ನಗೆಗಡಲಿನಲ್ಲಿ ತೇಲುವಂತೆ ಮಾಡಿತು. ಈ ಸಂದರ್ಭ ವಿಪಕ್ಷಗಳ ಪ್ರತಿಕ್ರಿಯೆ ಹೇಗಿತ್ತು ಎಂದು ತಿಳಿಯುವುದು ಸಾಧ್ಯವಾಗಿಲ್ಲ. ಏಕೆಂದರೆ ಸಂಸದ್‌ ಟಿವಿ ಈ ಸಂದರ್ಭ ವಿಪಕ್ಷಗಳ ಗ್ಯಾಲರಿಯತ್ತ ಕ್ಯಾಮರಾ ಹಾಯಿಸಿಲ್ಲ.

"ವಾಹನ ಬದಲಾವಣೆ ಒಂದು ಪ್ರಮುಖ ಪ್ರಗತಿಯಲ್ಲಿರುವ ನೀತಿ. ಹಳೆಯ ಪೊಲಿಟಿಕಲ್‌.... ಬದಲಾಯಿಸುವುದು, ಓಹ್‌, ಕ್ಷಮಿಸಿ..." ಎಂದು ನಿರ್ಮಲಾ ಸೀತಾರಾಮನ್‌ ಹೇಳುತ್ತಿದ್ದಂತೆಯೇ ನಗುವಿನ ಸದ್ದು ಕೇಳಿಸಿತು.

"ನನಗೆ ಗೊತ್ತು," ಎಂದು ನಗುತ್ತಾ  ತಮ್ಮ ತಪ್ಪನ್ನು ತಿದ್ದು ಭಾಷಣ ಮುಂದುವರಿಸಿದ ಸಚಿವೆ, "ಪೊಲ್ಯೂಟಿಂಗ್" ಪದವನ್ನು ಹಲವು ಬಾರಿ ಒತ್ತಿ ಹೇಳಿದರು. ಸರಕಾರದ ಪರಿಸರ ಸಂರಕ್ಷಣೆ ನೀತಿಯಾನುಸಾರ ಹಳೆ ವಾಹನಗಳನ್ನು ಬದಲಾಯಿಸುವ ವಿಚಾರವಾಗಿ ಅವರು ಮಾತನಾಡುತ್ತಿದ್ದರು.

"ಬಜೆಟ್‌ 2021-22 ರಲ್ಲಿ ಉಲ್ಲೇಖಿಸಿದ ವಾಹನ ಗುಜರಿ ನೀತಿಯ ಮುಂದುವರಿದ ಭಾಗವಾಗಿ ರಾಜ್ಯಗಳಿಗೂ ಬೆಂಬಲ ದೊರೆಯಲಿದೆ," ಎಂದು ಸಚಿವೆ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)