varthabharthi


ಬಜೆಟ್ - 2023

ಕೇಂದ್ರ ಬಜೆಟ್ ನಲ್ಲಿ ಚುನಾವಣಾ ರಾಜ್ಯ ಕರ್ನಾಟಕಕ್ಕೆ ರೂ. 5,300 ಕೋಟಿ ಮೊತ್ತದ ಅನುದಾನ ಘೋಷಣೆ

ವಾರ್ತಾ ಭಾರತಿ : 1 Feb, 2023

ನಿರ್ಮಲಾ ಸೀತಾರಾಮನ್ (PTI)

ಹೊಸ ದಿಲ್ಲಿ: ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಕರ್ನಾಟಕಕ್ಕೆ  ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಟ್ಟು ರೂ. 5,300 ಕೋಟಿ ಮೊತ್ತದ ಅನುದಾನವನ್ನು ಘೋಷಿಸಿದ್ದಾರೆ.

ಈ ಅನುದಾನವನ್ನು ಬರಪೀಡಿತ ಉತ್ತರ ಕರ್ನಾಟಕದಲ್ಲಿ ಸುಸ್ಥಿರ ಕಿರು ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಒದಗಿಸಲಾಗಿದೆ. ಈ ಯೋಜನೆಯು ತುಂಗಭದ್ರಾ ನದಿಯಿಂದ 17.40 ಟಿಎಂಸಿ ನೀರನ್ನು ಮೇಲೆತ್ತಿ ಕೃಷಿ ಭೂಮಿಗಳಿಗೆ ಉಣಿಸುವ ಉದ್ದೇಶ ಹೊಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)