ಅಂತಾರಾಷ್ಟ್ರೀಯ
ಐವರು ಫೆಲಸ್ತೀನೀಯರ ಹತ್ಯೆ : ಇಸ್ರೇಲ್

ಜೆರುಸಲೇಂ, ಫೆ.6: ಪಶ್ಚಿಮ ದಂಡೆಯ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ ಇಸ್ರೇಲ್ ಪಡೆ ಐವರು ಫೆಲಸ್ತೀನ್ ಬಂದೂಕುಧಾರಿಗಳನ್ನು ಹತ್ಯೆ ಮಾಡಿದೆ ಎಂದು ಇಸ್ರೇಲ್‌ನ ಭದ್ರತಾ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.
ಇಸ್ರೇಲಿಗಳ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಶಂಕಿತರನ್ನು ಬಂಧಿಸಲು ಸೇನೆ ಈ ದಾಳಿ ಕಾರ್ಯಾಚರಣೆ ನಡೆಸಿದೆ. ಕೆಲ ದಿನಗಳ ಹಿಂದೆ ಪಶ್ಚಿಮದಂಡೆಯ ರೆಸ್ಟಾರೆಂಟ್‌ನಲ್ಲಿ ಫೆಲಸ್ತೀನ್ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಲು ಪ್ರಯತ್ನಿಸಿದಾಗ ತಾಂತ್ರಿಕ ವೈಫಲ್ಯದಿಂದ ಗುಂಡು ಹಾರಲಿಲ್ಲ. ಈ ದಾಳಿಯ ಶಂಕಿತ ಆರೋಪಿಗಳು ನಿರಾಶ್ರಿತರ ಶಿಬಿರದಲ್ಲಿ ಅಡಗಿಕೊಂಡಿರುವ ಮಾಹಿತಿಯಂತೆ ಅವರನ್ನು ಬಂಧಿಸಲು ತೆರಳಿದಾಗ ನಡೆದ ಘರ್ಷಣೆಯಲ್ಲಿ ಐವರು ಬಂದೂಕುಧಾರಿಗಳನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಗುಂಡಿನ ದಾಳಿಯನ್ನು ದೃಢಪಡಿಸಿರುವ ಫೆಲಸ್ತೀನ್ ಆರೋಗ್ಯ ಸಚಿವಾಲಯ, ದಾಳಿಯಲ್ಲಿ ಕೇವಲ ಮೂರು ಮಂದಿಗೆ ಗಾಯವಾಗಿದ್ದು ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ