varthabharthi


ಬೆಂಗಳೂರು

ವಂಚನೆ ಪ್ರಕರಣದ ಆರೋಪಿಯೊಂದಿಗೆ ನಳಿನ್ ಕುಮಾರ್ ಕಟೀಲ್ ಆತ್ಮೀಯ ಒಡನಾಟ: ಫೋಟೊ ಹಂಚಿಕೊಂಡ ಕಾಂಗ್ರೆಸ್

ವಾರ್ತಾ ಭಾರತಿ : 6 Feb, 2023

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಸೈಟ್  ಹೆಸರಿನಲ್ಲಿ ವಂಚನೆ ನಡೆಸಿದ ಜಯ ಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ @INCKarnataka ಆರೋಪಿಸಿದೆ.

ಸೋಮವಾರ ಟ್ವಿಟ್ ಮಾಡಿರುವ ಕಾಂಗ್ರೆಸ್, ಆರೋಪಿಯು ನಳಿನ್ ಕುಮಾರ್ ಕಟೀಲ್ ಅವರೊಂದಿಗಿದ್ದ ಪೋಟೊ ಹಂಚಿಕೊಂಡಿದೆ. 

''ಸೈಟ್ ಹೆಸರಲ್ಲಿ ವಂಚನೆ ನಡೆಸಿದ ಜಯಕುಮಾರ್ ಬಿಜೆಪಿ ಅಧ್ಯಕ್ಷರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾನೆ. ನಳಿನ್ ಕುಮಾರ್ ಅವರೇ @nalinkateel, ಈತನ ವಂಚನೆಯಲ್ಲಿ ನಿಮ್ಮದೂ ಪಾಲಿದೆಯೇ? ಈತನ ವಂಚನೆಗೆ ನಿಮ್ಮ ಶ್ರೀರಕ್ಷೆ ಇದೆಯೇ? ಈ ವಂಚಕನಿಗೆ ಬಿಜೆಪಿ ನಾಯಕರ ರಕ್ಷಣೆ ಇರುವಾಗ ಲಕ್ಷಾಂತರ ರೂಪಾಯಿ ಕಳೆದುಕೊಂಡ ಜನರಿಗೆ ನ್ಯಾಯ ಸಿಗಲು ಸಾಧ್ಯವೇ? '' ಎಂದು ಕಾಂಗ್ರೆಸ್ ಪ್ರಶ್. 

''ಅತ್ಯಾಚಾರಿಗಳು, ಬ್ರೋಕರ್ ಗಳು, ವೇಶ್ಯಾವಾಟಿಕೆ ದಂಧೆಕೋರರು,  ಭ್ರಷ್ಟರು, ವಂಚಕರು, ರೌಡಿಗಳು, ಕ್ರಿಮಿನಲ್ ಗಳ ಏಕೈಕ ತವರು ಮನೆ ಬಿಜೆಪಿ. ಬಿಜೆಪಿ ಎಂದರೆ ಭ್ರಷ್ಟರ ಕೂಟವಾಗಿರುವಾಗ ಈತ ಬಿಜೆಪಿ ಸದಸ್ಯನಾಗಿರುವುದರಲ್ಲಿ ವಿಶೇಷವೆನಿಲ್ಲ'' ಎಂದು ಕಾಂಗ್ರೆಸ್ ಟೀಕಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)