varthabharthi


ಅಂತಾರಾಷ್ಟ್ರೀಯ

ಹೆಲಿಕಾಪ್ಟರ್ ಪ್ರಯಾಣಕ್ಕೆ ಬ್ರಿಟನ್ ಪ್ರಧಾನಿ ಸುನಾಕ್ ಅಪಾರ ವೆಚ್ಚ: ವ್ಯಾಪಕ ಟೀಕೆ

ವಾರ್ತಾ ಭಾರತಿ : 7 Feb, 2023

ಲಂಡನ್, ಫೆ.6: ಕಳೆದ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಖಾಸಗಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲು ಮಾಡಿರುವ ವೆಚ್ಚದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.

 ಪ್ರಧಾನಿಯಾದ ಬಳಿಕ ಸುನಾಕ್ 16,000 ಪೌಂಡ್‌ಗಳಷ್ಟು ಹಣವನ್ನು ಹೆಲಿಕಾಪ್ಟರ್ ಪ್ರಯಾಣಕ್ಕೆ ವೆಚ್ಚಮಾಡಿದ್ದು ತನ್ನ ಕ್ಷೇತ್ರ ನಾರ್ಥ್‌ಯಾರ್ಕ್‌ಶೈರ್‌ನ ಪ್ರವಾಸದ ಖರ್ಚನ್ನು ಖಾಸಗಿಯವರು ಭರಿಸಿರುವುದು ಪ್ರಶ್ನೆಗೆ ಕಾರಣವಾಗಿದೆ. ಪ್ರಧಾನಿಯಾದ ಬಳಿಕ ತನ್ನ ಕ್ಷೇತ್ರ ಸಂದರ್ಶಿಸಲು ತೆರಿಗೆದಾರರ ನಿಧಿಯ ಖಾಸಗಿ ಜೆಟ್ ಅನ್ನು ಬಳಸಿರುವುದು ವ್ಯಾಪಕ ಟೀಕೆಗೆ ಗ್ರಾಸವಾಗಿದೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.

ಈ ವರದಿಗೆ ಪ್ರತಿಕ್ರಿಯಿಸಿರುವ ಪ್ರಧಾನಿಯವರ ಕಾರ್ಯಾಲಯ ‘ಪ್ರಧಾನಿ ತನ್ನ ಪ್ರಯಾಣದ ವೆಚ್ಚವನ್ನು ತಾವೇ ಭರಿಸಿದ್ದಾರೆ. ಪ್ರಧಾನಿಯವರ ಪ್ರಯಾಣದ ವಿಷಯದಲ್ಲಿ ತಾನು ಪ್ರತಿಕ್ರಿಯಿಸುವುದಿಲ್ಲ ’ ಎಂದಿದೆ. ಆದರೆ ಸುನಾಕ್ ಹೆಲಿಕಾಪ್ಟರ್ ಪ್ರಯಾಣಕ್ಕೆ ಬ್ರಿಟನ್ ಮಾಧ್ಯಮಗಳಿಂದ ವ್ಯಾಪಕ ಟೀಕೆ ಎದುರಾಗಿದೆ. ಸುನಕ್ ಅವರ ಸಂಸದೀಯ ಕ್ಷೇತ್ರದ ಬಳಿಯಿರುವ ನಾರ್ಥಲರ್ಟನ್‌ಗೆ ಲಂಡನ್‌ನಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಪ್ರಯಾಣಿಸಲು ಸಾಧ್ಯವಿರುವಾಗ ಈ ದುಂದುವೆಚ್ಚ ಸರಿಯೇ ಎಂದು ಪ್ರಶ್ನಿಸಲಾಗಿದೆ. ಅಲ್ಲದೆ ಹೆಲಿಕಾಪ್ಟರ್ ಪ್ರಯಾಣವು ಅಪಾರ ಪ್ರಮಾಣದ ಇಂಗಾಲವನ್ನು ವಾತಾವರಣಕ್ಕೆ ಬಿಡುಗಡೆಗೊಳಿಸುತ್ತದೆ. ಹವಾಮಾನ ವೈಪರೀತ್ಯ ಸಮಸ್ಯೆ ಪರಿಹಾರಕ್ಕೆ ಸುನಾಕ್ ಅವರ ಬದ್ಧತೆಯನ್ನು ಇದು ಪ್ರಶ್ನಿಸುತ್ತದೆ ಎಂದು ಟೀಕೆ ವ್ಯಕ್ತವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)