ಕ್ರೀಡೆ
1,204 ದಿನಗಳ ನಂತರ ಟೆಸ್ಟ್ ಶತಕ ಬಾರಿಸಿದ ವಿರಾಟ್ ಕೊಹ್ಲಿ
ವಾರ್ತಾ ಭಾರತಿ : 12 Mar, 2023

ವಿರಾಟ್ ಕೊಹ್ಲಿ (Photo: Twitter)
ಅಹಮದಾಬಾದ್: ಆಸ್ಟ್ರೇಲಿಯ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ 28 ನೇ ಟೆಸ್ಟ್ ಶತಕ ಹಾಗೂ 75 ನೇ ಅಂತಾರಾಷ್ಟ್ರೀಯ ಶತಕವನ್ನು ಸಿಡಿಸಿದರು,
ಅಹಮದಾಬಾದ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನ 4ನೇ ದಿನದಾಟವಾದ ರವಿವಾರ ಆಸ್ಟ್ರೇಲಿಯ ವಿರುದ್ಧ 241 ಎಸೆತಗಳಲ್ಲಿ5 ಬೌಂಡರಿ ನೆರವಿನಿಂದ ಶತಕ ತಲುಪಿದರು.
1,204 ದಿನಗಳ ನಂತರ ಕೊಹ್ಲಿ ಟೆಸ್ಟ್ ಶತಕ ಬಾರಿಸಿದ್ದಾರೆ.
34ರ ಹರೆಯದ ಕೊಹ್ಲಿ ಈಗ ಆಸ್ಟ್ರೇಲಿಯ ವಿರುದ್ಧ 16 ಅಂತರ್ ರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ.
ಭಾರತ 142 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 411 ರನ್ ಗಳಿಸಿದ್ದು, ಕೊಹ್ಲಿ(ಔಟಾಗದೆ 110) ಹಾಗೂ ಅಕ್ಷರ್ ಪಟೇಲ್(ಔಟಾಗದೆ 6) ಕ್ರೀಸ್ ನಲ್ಲಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)