varthabharthi


ಅಂತಾರಾಷ್ಟ್ರೀಯ

ಆಸ್ಕರ್ ಪ್ರಶಸ್ತಿ ಗೆದ್ದ ಭಾರತದ ಕಿರು ಸಾಕ್ಷ್ಯಚಿತ್ರ 'The Elephant Whisperers'

ವಾರ್ತಾ ಭಾರತಿ : 13 Mar, 2023

Photo: PTI

ಲಾಸ್ ಎಂಜಲೀಸ್: ವಿಶ್ವದ ಚಿತ್ರರಸಿಕರು ಕಾಯುತ್ತಿದ್ದ ಪ್ರತಿಷ್ಠಿತ 95ನೇ ಅಕಾಡೆಮಿ ಅವಾಡ್ರ್ಸ್ (ಆಸ್ಕರ್ ಪ್ರಶಸ್ತಿ) ಪ್ರದಾನ ಸಮಾರಂಭ ಇಲ್ಲಿನ ಡೊಲ್ಬಿ ಥಿಯೇಟರ್ ನಲ್ಲಿ ಆರಂಭವಾಗಿದ್ದು, ಭಾರತದ ದೀಪಿಕಾ ಪಡುಕೋಣೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಭಾರತದ ಚಿತ್ರಗಳು ಮೂರು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದು, 'ದ ಎಲಿಫೆಂಟ್ ವಿಷ್ಪರರ್ಸ್' ಉತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಆದರೆ ಬಹಳಷ್ಟು ನಿರೀಕ್ಷೆ ಮೂಡಿಸಿದ್ದ ಭಾರತದ ಸಾಕ್ಷ್ಯ ಚಿತ್ರ "ಆಲ್ ದ ಬ್ರೆತ್ಸ್" ನಿರಾಸೆ ಅನುಭವಿಸಿದೆ. ಈ ವಿಭಾಗದಲ್ಲಿ ನವಾನಿ ಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ನಾಟು ನಾಟು ಹಾಡು ಪ್ರಶಸ್ತಿ ಸುತ್ತಿನಲ್ಲಿದ್ದು, ಚಿತ್ರಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಹಾಡಿನ ಪ್ರದರ್ಶನ ಡಲ್ಬಿ ಥಿಯೇಟರ್ ನಲ್ಲಿ ಚಿತ್ರರಸಿಕರ ಮನ ಸೂರೆಗೊಂಡಿದೆ. ಇತರ ವಿಭಾಗಗಳ ವಿಜೇತರ ಪಟ್ಟಿ ಇಲ್ಲಿದೆ:

ಉತ್ತಮ ಪೋಷಕ ನಟ: ಕೆ ಹ್ಯೂ ಕ್ವೆನ್ (ಎವೆರಿಥಿಂಗ್, ಎವೆರಿವೇರ್ ಆಲ್ ಅಟ್ ವನ್ಸ್)
ಉತ್ತಮ ಪೋಷಕ ನಟಿ: ಜಿಮ್ಮಿ ಲೀ ಕರ್ಟೀಸ್ (ಎವೆರಿಥಿಂಗ್, ಎವೆರಿವೇರ್ ಆಲ್ ಅಟ್ ವನ್ಸ್)
ಉತ್ತಮ ಸಾಕ್ಷ್ಯ ಚಿತ್ರ: ನವಾನಿ
ಉತ್ತಮ ಲೈವ್ ಆ್ಯಕ್ಷನ್ ಕಿರುಚಿತ್ರ: ಆ್ಯನ್ ಐರಿಷ್ ಗುಡ್‍ಬೈ
ಉತ್ತಮ ಛಾಯಾಗ್ರಹಣ: ಜೇಮ್ಸ್ ಫ್ರೆಂಡ್ಸ್ (ಆಲ್ ಕ್ವೈಟ್ ಆನ್ ದ ವೆಸ್ಟರ್ನ್ ಫ್ರಂಟ್)
ಉತ್ತಮ ಪ್ರಸಾದನ ಮತ್ತು ಕೇಶಾಲಂಕಾರ: ಆ್ಯಡ್ರಿಯಂಟ್ ಮೊರೊಟ್, ಜ್ಯೂಡಿ ಚಿನ್ ಮತ್ತು ಆನ್ನೆಮೇರಿ ಬ್ರೆಡ್ಲಿ (ದ ವೇಲ್)
ಉತ್ತಮ ಆ್ಯನಿಮೇಟೆಡ್ ಚಿತ್ರ: ಗುಲೆರ್ಮೊ ಡೆಲ್ ಟೊರೊ ಅವರ ಪಿನೊಸಿಯೊ
ಉತಮ ವರ್ಣಾಲಂಕಾರ: ಬ್ಲ್ಯಾಕ್ ಪ್ಯಾಂಥರ್: ವಕಾಂಡಫಾರೆವರ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)