varthabharthi


ಕ್ರೀಡೆ

ಡ್ರಾದಲ್ಲಿ ಮುಕ್ತಾಯವಾದ ಪಂದ್ಯಾಟ: ಆಸ್ಟ್ರೇಲಿಯ ವಿರುದ್ಧ ಸರಣಿ ಗೆದ್ದ ಭಾರತ

ವಾರ್ತಾ ಭಾರತಿ : 13 Mar, 2023

Photo: Twitter

ಅಹ್ಮದಾಬಾದ್:‌ ಇಲ್ಲಿ ನಡೆಯುತ್ತಿರುವ ಬಾರ್ಡರ್‌ ಗಾವಸ್ಕರ್‌ ಟೆಸ್ಟ್‌ ಪಂದ್ಯಾಟವು ನಿರೀಕ್ಷೆಯಂತೆಯೇ ಡ್ರಾದಲ್ಲಿ ಅಂತ್ಯವಾಗಿದೆ. ಕೊನೆಯ ಪಂದ್ಯಾಟದಲ್ಲಿ ಆಸ್ಟ್ರೇಲಿಯಾ ಪರ ಬ್ಯಾಟರ್‌ ಗಳು ದಿನಪೂರ್ತಿ ಬ್ಯಾಟಿಂಗ್‌ ಮಾಡಿದ ಕಾರಣ ಪಂದ್ಯವು ನಿರೀಕ್ಷಿತ ಡ್ರಾದಲ್ಲಿ ಮುಕ್ತಾಯಗೊಂಡಿದೆ.  ಭಾರತ ತಂಡವು ಸದ್ಯ 2-1 ಅಂತರದಲ್ಲಿ ಬಾರ್ಡರ್-ಗಾವಸ್ಕರ್‌ ಟ್ರೋಫಿಯನ್ನು ವಶಪಡಿಸಿಕೊಂಡಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಗೂ ಭಾರತ ತಂಡವು ತೇರ್ಗಡೆಗೊಂಡಿದೆ. 

ಪ್ರಥಮ ಇನ್ನಿಂಗ್ಸ್‌ ನಲ್ಲಿ ಆಸ್ಟ್ರೇಲಿಯಾ ತಂಡವು 480 ರನ್‌ ಗಳನ್ನು ಗಳಿಸಿದ್ದು, ಬಳಿಕ ಭಾರತ ತಂಡವು ಕೊಹ್ಲಿ ಮತ್ತು ಗಿಲ್‌ ಶತಕದ ನೆರವಿನಿಂದ 571 ರನ್‌ ಗಳಿಸಲು ಶಕ್ತವಾಗಿತ್ತು. ಬಳಿಕದ ಇನ್ನಿಂಗ್ಸ್‌ ನಲ್ಲಿ ಆಸ್ಟ್ರೇಲಿಯಾ 175 ರನ್‌ ಗಳಿಗೆ ಡಿಕ್ಲೇರ್‌ ಮಾಡಿಕೊಂಡು, ಪಂದ್ಯಾಟವು ಡ್ರಾನಲ್ಲಿ ಅಂತ್ಯವಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)