varthabharthi


ಸಿನಿಮಾ

ಕನ್ನಡ ಸೇರಿ ಐದು ಭಾಷೆಯಲ್ಲಿ 'ಕೇಸರಿಯಾ ರಂಗು' ಹಾಡಿ ಸಂಚಲನ ಮೂಡಿಸಿದ ಸಿಖ್‌ ಗಾಯಕ

ವಾರ್ತಾ ಭಾರತಿ : 15 Mar, 2023

Screengrab | Twitter 

ಹೊಸದಿಲ್ಲಿ: ಹಿಂದಿ ಚಲನಚಿತ್ರ ಬ್ರಹ್ಮಾಸ್ತ್ರದ 'ಕೇಸರಿಯಾ' ಹಾಡಿನ ಐದು ಭಾಷೆಯ ಅವತರಣಿಕೆಯನ್ನು ಒಂದೇ ಬಾರಿ ಹಾಡಿದ ಪಂಜಾಬಿ ಗಾಯಕ ಸ್ನೇಹದೀಪ್‌ ಸಿಂಗ್‌ ಕಲ್ಸಿ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ದಕ್ಷಿಣ ಭಾರತೀಯ ಚಿತ್ರರಂಗ ಸೇರಿದಂತೆ ಬಾಲಿವುಡ್‌ ನ ಹಲವರು ಸ್ನೇಹದೀಪ್‌ ರ ವೈರಲ್‌ ವಿಡಿಯೋವನ್ನು ಮೆಚ್ಚಿ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ಸ್ನೇಹದೀಪ್‌ ಅವರು ಈ ಹಾಡನ್ನು ಮಾರ್ಚ್ 13 ರಂದು ಹಂಚಿಕೊಂಡಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಈ ವಿಡಿಯೋ ಲಕ್ಷಾಂತರ ಮಂದಿಯ ಗಮನ ಸೆಳೆದಿದೆ. 

ಟ್ವಿಟರಿನಲ್ಲಿ ಅಷ್ಟೇನೂ ಸಕ್ರಿಯವಲ್ಲದ ಸ್ನೇಹದೀಪ್‌ ಅವರು ಬಹುತೇಕ ತಮ್ಮ ವಿಡಿಯೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ, ಆದರೆ, ಇತ್ತೀಚಿನ ಅವರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಗಳಿಸಿಕೊಂಡ ಮೆಚ್ಚುಗೆಗೆ ಅವರೇ ಅಚ್ಚರಿಗೊಂಡಿದ್ದಾರೆ.

ಹಾಡಿನ ಎಲ್ಲಾ ಪ್ರಾದೇಶಿಕ ಭಾಷೆಗಳ ಅವತರಣಿಕೆಯನ್ನು ಒಂದೇ ವಿಡಿಯೋದಲ್ಲಿ ತಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗರು ಸಂಗೀತಕ್ಕೆ ಗಡಿಗಳಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದಿದ್ದಾರೆ.

ಇದನ್ನೂ ಓದಿ: 7 ವಿಭಾಗಗಳಲ್ಲಿ ಆಸ್ಕರ್‌ ಪ್ರಶಸ್ತಿ ಗೆದ್ದ ಚಿತ್ರ ತಂಡದಲ್ಲಿದ್ದ ಭಾರತೀಯನ ಬಗ್ಗೆ ಇಲ್ಲಿದೆ ಮಾಹಿತಿ...

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)