varthabharthi


ಸಿನಿಮಾ

ಆಸ್ಕರ್‌ಗೆ ತಪ್ಪಾದ ಸಿನೆಮಾಗಳನ್ನು ಕಳುಹಿಸುತ್ತಿರುವುದರಿಂದ ನಾವು ಪ್ರಶಸ್ತಿ ಗೆಲ್ಲುತ್ತಿಲ್ಲ: ಎ.ಆರ್‌. ರಹ್ಮಾನ್

ವಾರ್ತಾ ಭಾರತಿ : 16 Mar, 2023

Photo: PTI

ಹೊಸದಿಲ್ಲಿ: ಭಾರತದಿಂದ ಆಸ್ಕರ್‌ ಗೆ ತಪ್ಪಾದ ಚಿತ್ರಗಳನ್ನು ಕಳುಹಿಸಿದ್ದುದರಿಂದ ಅಂತಿಯ ಆಯ್ಕೆಯಲ್ಲಿ ಭಾರತೀಯ ಸಿನೆಮಾಗಳು ಆಸ್ಕರ್‌ ಪ್ರಶಸ್ತಿ ಗೆಲ್ಲುತ್ತಿರಲಿಲ್ಲ ಎಂದು ಎರಡು ಬಾರಿ ಆಸ್ಕರ್‌ ಅಕಾಡೆಮಿ ಪ್ರಶಸ್ತಿ ವಿಜೇತ ಎ.ಆರ್. ರಹ್ಮಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

“ಕೆಲವೊಮ್ಮೆ, ನಮ್ಮ ಚಲನಚಿತ್ರಗಳು ಆಸ್ಕರ್‌ವರೆಗೆ ಹೋಗುವುದನ್ನು ನಾನು ನೋಡುತ್ತೇನೆ (ಆದರೆ) ಅವುಗಳು ಆಸ್ಕರ್‌ ಅನ್ನು ಪಡೆಯುವುದಿಲ್ಲ. ತಪ್ಪಾದ ಚಲನಚಿತ್ರಗಳನ್ನು ಆಸ್ಕರ್‌ಗೆ ಕಳುಹಿಸಲಾಗುತ್ತಿದೆ, ”ಎಂದು ಸಂಗೀತ ದಂತಕಥೆ ಎಲ್ ಸುಬ್ರಮಣ್ಯಂ ಅವರೊಂದಿಗಿನ ಸಂವಾದದಲ್ಲಿ ರಹ್ಮಾನ್ ಹೇಳಿದ್ದಾರೆ.

ರಹ್ಮಾನ್ ಮತ್ತು ಸುಬ್ರಮಣ್ಯಂ ನಡುವಿನ ಸಂಭಾಷಣೆಯ ವೀಡಿಯೊವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಬುಧವಾರ ಸಂಜೆ ಅಪ್‌ಲೋಡ್ ಮಾಡಲಾಗಿದೆ.

ರಾಜಮೌಳಿಯವರ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಕೆಲವೇ ದಿನಗಳಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. 2009 ರಲ್ಲಿ ಸ್ಲಮ್‌ಡಾಗ್ ಮಿಲಿಯನೇರ್‌ನ ಜೈ ಹೋ ಹಾಡಿಗೆ ರಹ್ಮಾನ್ ಇದೇ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)