varthabharthi


ಗಲ್ಫ್ ಸುದ್ದಿ

ದುಬೈಯ ಬುರ್ಜ್ ಅಲ್ ಅರಬ್ ನ ಹೆಲಿಪ್ಯಾಡ್‌ ನಲ್ಲಿ ಇಳಿದ ವಿಮಾನ !

ವಾರ್ತಾ ಭಾರತಿ : 16 Mar, 2023

ದುಬೈ, ಮಾ.16: ದುಬೈಯ ಬುರ್ಜ್ ಅಲ್ ಅರಬ್ ಹೋಟೆಲ್ ನ 27 ಮೀಟರ್ ಅಗಲದ ಹೆಲಿಪ್ಯಾಡ್ ನಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವ ಮೂಲಕ ಪೋಲ್ಯಾಂಡ್ ನ ಪೈಲಟ್ ಲ್ಯೂಕ್ ಝೆಪೀಲಾ ವಿಶಿಷ್ಟ ಸಾಧನೆ ಮಾಡಿದ್ದಾರೆ.

ವಿಶೇಷವಾಗಿ ವಿನ್ಯಾಸಗೊಳಿಸಿದ ವಿಮಾನವು ಬುರ್ಜ್ ಅಲ್ಅರಬ್ ಹೋಟೆಲ್ನ 56ನೇ ಮಹಡಿಯಲ್ಲಿ, ನೆಲದಿಂದ 212 ಮೀಟರ್ ಎತ್ತರವಿರುವ ಹೆಲಿಪ್ಯಾಡ್ನಲ್ಲಿ ಇಳಿಯುತ್ತಿರುವ ವೀಡಿಯೊವನ್ನು ರೆಡ್ಬುಲ್ ಮೋಟರ್ಸ್ಪೋಟ್ರ್ಸ್ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದು ಇದನ್ನು 3 ದಶಲಕ್ಷ ಮಂದಿ ವೀಕ್ಷಿಸಿದ್ದು 1.7 ಲಕ್ಷ ಲೈಕ್ ಕಮೆಂಟ್ ಬಂದಿದೆ. ಝೆಪೀಲಾ ಅವರು 650 ಬಾರಿ ಅಭ್ಯಾಸ ನಡೆಸಿದ ಬಳಿಕ ಕಡೆಗೂ ತನ್ನ ಪ್ರಯತ್ನದಲ್ಲಿ ಸಫಲರಾಗಿದ್ದಾರೆ ಎಂದು ದುಬೈಯ ಮಾಧ್ಯಮ ಕಚೇರಿ ಪ್ರಕಟಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)