ಬೆಂಗಳೂರು
ಚಿನ್ನ ಕಳ್ಳಸಾಗಣಿಕೆ ಪ್ರಕರಣ: ಸ್ವಪ್ನಾ ಸುರೇಶ್‍ಗೆ ಬೆದರಿಕೆ ಹಾಕಿದ್ದ ಆರೋಪಿಯ ವಿಚಾರಣೆ

ಸ್ವಪ್ನಾ ಸುರೇಶ್
ಬೆಂಗಳೂರು, ಮಾ.17: ಕೇರಳದಲ್ಲಿ ಇತ್ತೀಚೆಗೆ ಬಯಲಾಗಿದ್ದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಯಾದ ಸ್ವಪ್ನಾ ಸುರೇಶ್‍ಗೆ ಬೆದರಿಕೆ ಹಾಕಿದ್ದ ಆರೋಪದಡಿ ಓರ್ವನನ್ನು ಇಲ್ಲಿನ ಕೆಆರ್ ಪುರ ಠಾಣಾ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಆರೋಪಿ ವಿಜೇಶ್‍ಪಿಳ್ಳೈ ಎಂಬಾತನನ್ನು ವಿಚಾರಣೆ ನಡೆಸಲಾಗಿದ್ದು, ಸ್ವಪ್ನಾ ಸುರೇಶ್ ಆರೋಪಕ್ಕೆ ಸಂಬಂಧಿಸಿದಂತೆ ಲಿಖಿತ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದಾರೆ.
ಸ್ವಪ್ನಾ ಸುರೇಶ್ ಬೆಂಗಳೂರಿನಲ್ಲಿ ನೀಡಿರುವ ದೂರಿನಲ್ಲಿ ಮಾ.4ರಂದು ಬೆಂಗಳೂರಿನಲ್ಲಿ ತನ್ನನ್ನು ಭೇಟಿಯಾಗಿದ್ದ ವಿಜೇಶ್ ಪಿಳ್ಳೈ ತನ್ನನ್ನು ಸಿಪಿಎಂ ಕಾರ್ಯದರ್ಶಿ ಗೋವಿಂದನ್ ಕಳುಹಿಸಿರುವುದಾಗಿ ಮಾತು ಆರಂಭಿಸಿದ್ದರು. ಬಳಿಕ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಯಾವುದೇ ಹೇಳಿಕೆ ನೀಡಬಾರದು. ಇದಕ್ಕೆ ಪ್ರತಿಯಾಗಿ 30 ಕೋಟಿ ರೂ. ಕೊಡಲಿದ್ದು, ಅದನ್ನು ಪಡೆದು ಒಂದು ವಾರದೊಳಗೆ ದೇಶ ಬಿಟ್ಟು ತೆರಳಬೇಕು ಇಲ್ಲವಾದರೆ ನಿನ್ನ ಬ್ಯಾಗಿನಲ್ಲಿ ಬಾಂಬ್ ಇಟ್ಟು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಉಲ್ಲೇಖಿಸಿದ್ದರು.
ಈ ಸಂಬಂಧ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ ಮೇರೆಗೆ ವಿಜೇಶ್ ಪಿಳ್ಳೈವಿಚಾರಣೆಗೆ ಹಾಜರಾಗಿದ್ದಾರೆ. ಸದ್ಯ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ಪುರಂ ಪೊಲೀಸರು, ಸದ್ಯ ಘಟನೆ ನಡೆದಿದೆ ಎನ್ನಲಾದ ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿ ತನಿಖೆ ಮುಂದುವರೆಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ