ಕರ್ನಾಟಕ
ವಾರ್ತಾಭಾರತಿ ವರದಿ ಟ್ವೀಟ್ ಮಾಡಿದ ಕಾಂಗ್ರೆಸ್ ಮುಖಂಡ
ವೆಚ್ಚವಾಗದೆ ಉಳಿದ 41,942 ಕೋಟಿ ರೂ.: ರಾಜ್ಯ ಸರಕಾರದ ವಿರುದ್ಧ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ

ರಣದೀಪ್ ಸಿಂಗ್ ಸುರ್ಜೇವಾಲ
ಹೊಸದಿಲ್ಲಿ: ಕರ್ನಾಟಕ ಸರಕಾರವು ಜನಪರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಿಡುಗಡೆಯಾದ ಅನುದಾನಗಳಲ್ಲಿ ವೆಚ್ಚವಾಗದೆ ಉಳಿದ ಹಣದ ಕುರಿತ ವಾರ್ತಾಭಾರತಿ ಪ್ರಕಟಿಸಿದ್ದ ಜಿ. ಮಹಾಂತೇಶ್ ರ ಲೇಖನವನ್ನು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲರವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೊಮ್ಮಾಯಿ ಸರ್ಕಾರವು ರೂ. 41,942 ಕೋಟಿಯ “ಕಲ್ಯಾಣ ಮತ್ತು ಅಭಿವೃದ್ಧಿ ನಿಧಿಗಳನ್ನು” ಬಳಸಿಕೊಳ್ಳಲು “ಮರೆತಿದೆ”. ಕಲ್ಯಾಣ ಕರ್ನಾಟಕ ಪ್ರದೇಶ, ಉನ್ನತ ಶಿಕ್ಷಣ, ಕಿಸಾನ್, ಸಬ್ಸಿಡಿ ಪಂಪ್ ಸೆಟ್‌ಗಳು, ಆರೋಗ್ಯ ರಕ್ಷಣೆ ಮತ್ತು ಹೆಚ್ಚಿನವುಗಳಿಗಾಗಿ ಬೃಹತ್ ಮೊತ್ತಗಳು ಬಳಕೆಯಾಗದೇ ಉಳಿದಿವೆ. ಇದು ನಾಚಿಗೇಡಿನ ಮತ್ತು ಕ್ಷಮಿಸಲಾಗದ ವಿಚಾರ ಎಂದು ಅವರು ಸರಕಾರದ ವಿರುದ್ಧ ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿನ ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮ, ಪ್ರಾಥಮಿಕ ಆರೋಗ್ಯ ಸೌಲಭ್ಯ, ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ, ಪ್ರಧಾನಮಂತ್ರಿ ಕಿಸಾನ್, ಕೃಷಿ ಮೂಲಭೂತ ಸೌಕರ್ಯ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ, ಪ್ರಾಥಮಿಕ ಆರೋಗ್ಯ ಸೌಲಭ್ಯ ಬಲಪಡಿಸುವುದು, ವಿದ್ಯಾರ್ಥಿಗಳ ರಿಯಾಯಿತಿ ಪಾಸ್, ಕುಟೀರ ಭಾಗ್ಯ, ನೀರಾವರಿ ಪಂಪ್‌ಸೆಟ್, ಕನಿಷ್ಠ ಬೆಂಬಲ ಬೆಲೆ ಗಳಂತಹ ಮಹತ್ತರ ಕಾರ್ಯಕ್ರಮಗಳಿಗೆ 2022-23ನೇ ಸಾಲಿಗೆ ಬಿಡುಗಡೆಯಾಗಿದ್ದ ಒಟ್ಟು ಅನುದಾನದ ಪೈಕಿ 41,942.68 ಕೋಟಿ ರೂ.ಗಳನ್ನು ವೆಚ್ಚ ಮಾಡದೇ ಬಾಕಿ ಉಳಿಸಿಕೊಂಡಿರುವ ಬಗ್ಗೆ ವಾರ್ತಾಭಾರತಿ ವರದಿ ಮಾಡಿತ್ತು.
ಇದನ್ನೂ ಓದಿ: ಜನಪರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಿಡುಗಡೆಯಾದ ಅನುದಾನಗಳಲ್ಲಿ ವೆಚ್ಚವಾಗದೆ ಉಳಿದ 41,942 ಕೋಟಿ ರೂ.
Bommai Govt “forgot” to utilize ₹41,942 Crore of “welfare & development funds”.
— Randeep Singh Surjewala (@rssurjewala) March 18, 2023
Massive unutilized amounts for Kalyan Karnataka Region, Higher Education, Kisan, subsidised pump sets, Health Care and much more.
It is “Shameful & Unpardonable”.
SAVE KARNATAKA,
VOT OUT BJP! pic.twitter.com/0UMivFYjib
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ