ರಾಷ್ಟ್ರೀಯ
‘‘ದೇಶದ್ರೋಹಿ’’ ಲೇಖನ: ಕಾಶ್ಮೀರದ ಪತ್ರಕರ್ತನ ವಿರುದ್ಧ ದೋಷಾರೋಪ
ಜಮ್ಮು, ಮಾ. 18: ಸುದ್ದಿ ವೆಬ್ಸೈಟ್ ಒಂದರಲ್ಲಿ ‘‘ದೇಶದ್ರೋಹಿ’’ ಲೇಖನವೊಂದನ್ನು ಪ್ರಕಟಿಸಿರುವುದಕ್ಕಾಗಿ ಓರ್ವ ಪತ್ರಕರ್ತ ಮತ್ತು ವಿಶ್ವವಿದ್ಯಾನಿಲಯವೊಂದರ ವಿದ್ವಾಂಸರ ವಿರುದ್ಧ ಇಲ್ಲಿನ ನಿಯೋಜಿತ ನ್ಯಾಯಲಯವೊಂದು ದೋಷಾರೋಪಗಳನ್ನು ಹೊರಿಸಿದೆ. ಬಂಧಿತ ಪತ್ರಕರ್ತ ಪೀರ್ಝಾದ ಫಾಹದ್ ಶಾ ಮತ್ತು ಕಾಶ್ಮೀರ ವಿಶ್ವವಿದ್ಯಾನಿಲಯದ ವಿದ್ವಾಂಸ ಅಬ್ದುಲ್ ಅಲಾ ಫಾಝಿಲ್ ವಿರುದ್ಧದ ಪ್ರಕರಣವನ್ನು ರಾಜ್ಯ ತನಿಖಾ ಸಂಸ್ಥೆ (ಎಸ್ಐಎ) ನಡೆಸಿದೆ. ತನಿಖೆ ಪೂರ್ಣಗೊಂಡ ಬಳಿಕ ಆರೋಪಿಗಳ ವಿರುದ್ಧ ನ್ಯಾಯಾಲಯವು ದೋಷಾರೋಪ ಹೊರಿಸಿದೆ.
ಎನ್ಐಎ ಕಾಯ್ದೆಯಡಿ ನಿಯೋಜನೆಗೊಂಡಿರುವ ವಿಶೇಷ ನ್ಯಾಯಾಧೀಶ ಅಶ್ವನಿ ಕುಮಾರ್ ಗುರುವಾರ ಶಾ ಮತ್ತು ಫಝಿಲಿ ವಿರುದ್ಧ ದೋಷಾರೋಪ ಹೊರಿಸಿದರು.
‘ದ ಶ್ಯಾಕಲ್ಸ್ ಆಫ್ ಸ್ಲೇವರಿ ವಿಲ್ ಬ್ರೇಕ್’ (ಗುಲಾಮಗಿರಿಯ ಸಂಕಲೆ ಕಡಿಯುತ್ತದೆ) ಎಂಬ ತಲೆಬರಹದ ಲೇಖನಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಫಝಿಲಿ ಬರೆದ ಲೇಖನವನ್ನು, ಶಾ ಸಂಪಾದಕತ್ವದ ‘ದ ಕಾಶ್ಮೀರಿ ವಾಲಾ’ ಎಂಬ ವೆಬ್ಸೈಟ್ನಲ್ಲಿ ಕಳೆದ ವರ್ಷ ಪ್ರಕಟಿಸಲಾಗಿತ್ತು. ಕಳೆದ ವರ್ಷದ ಎಪ್ರಿಲ್ 4ರಂದು ಈ ಬಗ್ಗೆ ಸಿಐಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ