ದಕ್ಷಿಣ ಕನ್ನಡ
ಪಿ.ಎ. ಫಾರ್ಮಸಿ ಕಾಲೇಜು ವಾರ್ಷಿಕ ಕ್ರೀಡಾಕೂಟ

ಮಂಗಳೂರು, ಮಾ.22: ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆಯು ಸಹಾಯ ಮಾಡುವುದರ ಜೊತೆಗೆ ಶಿಸ್ತು, ಸಂಯಮದ ಪಾಠವನ್ನೂ ಕಲಿಸುತ್ತದೆ ಎಂದು ಪಿ.ಎ. ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ಸಜೀಶ್ ರಗುನಾಥನ್ ಹೇಳಿದ್ದಾರೆ.
ಅವರು ಕೊಣಾಜೆ ನಡುಪದವಿನ ಪಿ.ಎ. ಫಾರ್ಮಸಿ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಹಿಸಿದ ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಸಲೀಮುಲ್ಲಾಖಾನ್ ಮಾತನಾಡಿ, ಸೋಲು ಕೊನೆಯಲ್ಲ, ಅದು ಗೆಲುವಿನ ಸೋಪಾನ. ಕ್ರೀಡೆಯಲ್ಲಿ ಪರಿಣಿತರಾದವರಿಗೆ ಅಧ್ಯಯನ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಕಾಲೇಜಿನ ಕ್ರೀಡಾ ಸಂಘದ ಕಾರ್ಯದರ್ಶಿ ಮಾಲಿಕ್ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಪಿ.ಎ. ಕ್ಯಾಂಪಸ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಸರ್ಫುದ್ದೀನ್ ಪಿ.ಕೆ., ಡೀನ್ ಆಫ್ ಸ್ಟೂಡೆಂಟ್ ಅಫ್ಯಾರ್ಸ್ ಡಾ. ಸಯ್ಯದ್ ಅಮೀನ್ ಅಹ್ಮದ್, ಪಿ.ಎ. ಫಾರ್ಮಸಿ ಕಾಲೇಜಿನ ಉಪಪ್ರಾಂಶುಪಾಲ ಡಾ. ಮುಹಮ್ಮದ್ ಮುಬೀನ್, ಪಿ.ಎ. ಫಿಸಿಯೋಥೆರಪಿ ಕಾಲೇಜಿನ ಡಾ.ಆಯಿಶಾ, ಡಾ.ಶಾನಿರ್, ದ್ಯೆಹಿಕ ಶಿಕ್ಷಣ ಶಿಕ್ಷಕ ಇಕ್ಬಾಲ್ ಉಪಸ್ಥಿತರಿದ್ದರು. ತ್ರಿವೇಣಿ ಸ್ವಾಗತಿಸಿದರು. ಡಾ, ಸಿಂಧೂರ್ ವಂದಿಸಿದರು. ಧನ್ಯಾ ಕಾರ್ಯಕ್ರಮ ನಿರೂಪಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ