varthabharthi


ದಕ್ಷಿಣ ಕನ್ನಡ

ಬಂಟ್ವಾಳ: ಕೊಲೆ ಯತ್ನ ಪ್ರಕರಣದ ಆರೋಪಿಯ ಬಂಧನ

ವಾರ್ತಾ ಭಾರತಿ : 22 Mar, 2023

ಬಂಟ್ವಾಳ, ಮಾ.22: ಯುವಕನೋರ್ವನ ಕೊಲೆಗೆ ಯತ್ನಿಸಿ ತಲೆಮರೆಸಿಕೊಂಡಿದ್ದ ಪ್ರಕರಣದ ಆರೋಪಿಯನ್ನು ತಿಂಗಳ ಬಳಿಕ ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ನರಿಕೊಂಬು ಗ್ರಾಮದ ಪಿತ್ತಲಗುಡ್ಡೆ ನಿವಾಸಿ ನಿಸಾರ್ ಯಾನೆ ನಿಸಾರ್ ಅಹ್ಮದ್ ಬಂಧಿತ ಆರೋಪಿ.

ನಿಸಾರ್ ಫೆ.18ರಂದು ಪಾಣೆಮಂಗಳೂರು ಸಮೀಪದ ಜೈನರಪೇಟೆ ನಿವಾಸಿ ಸುಲೈಮಾನ್ ಎಂವರಿನಿಗೆ ಕತ್ತರಿಯಿಂದ ಇರಿದು ಕೊಲೆಗೆ ಪ್ರಯತ್ನಿಸಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು ಮಂಗಳವಾರ ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)