varthabharthi


ಅಂತಾರಾಷ್ಟ್ರೀಯ

ಭೂಕಂಪನದ ನಡುವೆಯೂ ಕಾರ್ಯಕ್ರಮ ಮುಂದುವರೆಸಿದ ಟಿವಿ ನಿರೂಪಕ: ವಿಡಿಯೋ ವೈರಲ್‌

ವಾರ್ತಾ ಭಾರತಿ : 22 Mar, 2023

Photo: Twitter/@Azalafridi10

ಹೊಸದಿಲ್ಲಿ/ಕಾಬೂಲ್:‌ ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ 6.6 ತೀವ್ರತೆಯ ಭೂಕಂಪ (Earthquake) ಸಂಭವಿಸಿದ್ದರಿಂದ ಉತ್ತರ ಭಾರತ ಮತ್ತು ನೆರೆಯ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. 

ಕಟ್ಟಡಗಳು ನಡುಗಲು ಪ್ರಾರಂಭಿಸುತ್ತಿದ್ದಂತೆ ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬರುತ್ತಿರುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 

ಇದೀಗ ಭೂಕಂಪನದ ತೀವ್ರತೆಯನ್ನು ತೋರಿಸುವ ಮತ್ತೊಂದು ವಿಡಿಯೋ ವೈರಲ್‌ ಆಗಿದ್ದು, ಪಾಕಿಸ್ತಾನದ ಪೇಶಾವರದಲ್ಲಿರುವ ನ್ಯೂಸ್ ಸ್ಟುಡಿಯೊವೊಂದು ಭೂಕಂಪನಕ್ಕೆ ಅದುರುತ್ತಿರುವ ದೃಶ್ಯ ಸೆರೆಯಾಗಿದೆ. ಕಟ್ಟಡ ನಡುಗುತ್ತಿದ್ದರೂ ಟಿವಿ ಚಾನೆಲ್ ನಿರೂಪಕರೊಬ್ಬರು ತಮ್ಮ ಲೈವ್‌ ಕಾರ್ಯಕ್ರಮವನ್ನು ಮುಂದುವರೆಸಿರುವ ವಿಡಿಯೋ ವೈರಲ್ ಆಗಿದೆ. 

ಈ ವಿಡಿಯೋ ಹಂಚಿಕೊಂಡಿರುವ ಟ್ವಿಟರ್ ಬಳಕೆದಾರರು, ''ಭೂಕಂಪನದ ಸಮಯದಲ್ಲಿಯೂ ಪಾಶ್ಟೋ ಟಿವಿ ಚಾನೆಲ್ ನ ಧೈರ್ಯವಂತ ನಿರೂಪಕ ತಮ್ಮ ಲೈವ್‌ ಕಾರ್ಯಕ್ರಮವನ್ನು ಮುಂದುವರೆಸಿದರು.” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಚುನಾವಣೆಯ ಕಾಲವಿದು ಎಚ್ಚರ..!: 'ಉರಿಗೌಡ, ನಂಜೇಗೌಡ' ಬಗ್ಗೆ ನಟ ಕಿಶೋರ್ ಎಚ್ಚರಿಕೆಯ ಸಂದೇಶ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)