varthabharthi


ಕ್ರೀಡೆ

34ನೇ ವಯಸ್ಸಿನಲ್ಲಿ ಫುಟ್ಬಾಲ್‌ ಬದುಕಿಗೆ ನಿವೃತ್ತಿ ಘೋಷಿಸಿದ ಮಸೂದ್‌ ಒಝಿಲ್

ವಾರ್ತಾ ಭಾರತಿ : 22 Mar, 2023

ಮಸೂದ್‌ ಒಝಿಲ್ (Twitter/@M10)

ಖ್ಯಾತ ಫುಟ್ಬಾಲ್‌ ಆಟಗಾರ ಮಸೂದ್‌ ಒಝಿಲ್‌ (Mesut Ozil) ತಮ್ಮ 34ನೇ ವಯಸ್ಸಿನಲ್ಲಿ ಫುಟ್‌ಬಾಲ್‌ ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ತಾಣದಲ್ಲಿ ಮಾಹಿತಿ ನೀಡಿದ್ದಾರೆ. 

ಆರ್ಸೆನಲ್ ಮತ್ತು ಜರ್ಮನಿಯ ಇಂಟರ್‌ನ್ಯಾಶನಲ್ ಮಾಜಿ ಮಿಡ್‌ಫೀಲ್ಡರ್ ಆಗಿದ್ದ ಅವರು ಟರ್ಕಿಯ ಇಸ್ತಾಂಬುಲ್ ಬಸಕ್ಸೆಹಿರ್‌ಗಾಗಿ ಆಡುತ್ತಿದ್ದರು. ಆದರೆ, ಹಲವಾರು ಬಾರಿ ಗಾಯದ ಸಮಸ್ಯೆಗಳನ್ನು ಎದುರಿಸಿದ್ದ ಕಾರಣ ಕ್ಲಬ್‌ ಗಾಗಿ ಈ ಬಾರಿ ಕೇವಲ ಎಂಟು ಬಾರಿ ಮಾತ್ರ ಆಡಿದ್ದರು.

ಒಝಿಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, "ಎಲ್ಲರ ಗಮನಕ್ಕೆ, ಚಿಂತನಶೀಲ ಪರಿಗಣನೆಯ ನಂತರ, ನಾನು ವೃತ್ತಿಪರ ಫುಟ್‌ಬಾಲ್‌ನಿಂದ ನನ್ನ ತಕ್ಷಣದ ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ. ನಾನು ಈಗ ಸುಮಾರು 17 ವರ್ಷಗಳಿಂದ ವೃತ್ತಿಪರ ಫುಟ್ಬಾಲ್ ಆಟಗಾರನಾಗುವ ಅವಕಾಶ ಹೊಂದಿದ್ದೇನೆ ಮತ್ತು ಅದಕ್ಕಾಗಿ ನಾನು ನಂಬಲಾಗದಷ್ಟು ಕೃತಜ್ಞನಾಗಿದ್ದೇನೆ."  ಎಂದು ಅವರು ತಮ್ಮ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)