varthabharthi


ಕರ್ನಾಟಕ

ದಲಿತರು ಸೋಲಿಸುತ್ತಾರೆಂದು ಕೋಲಾರ ಬಿಟ್ಟು ಸಿದ್ದರಾಮಯ್ಯ ಪಲಾಯನ: ಬಿಜೆಪಿ ಆರೋಪ

ವಾರ್ತಾ ಭಾರತಿ : 22 Mar, 2023

ಬೆಂಗಳೂರು: 'ಚುನಾವಣೆ ಹತ್ತಿರ ಬಂದಂತೆ ಕರ್ನಾಟಕ ಕಾಂಗ್ರೆಸ್‌ ಪಕ್ಷಕ್ಕೆ ದಲಿತರ ನೆನಪಾಗಿದೆ' ಎಂದು ಬಿಜೆಪಿ ಟೀಕಿಸಿದೆ. 

ದಲಿತರ ವಿಚಾರದಲ್ಲಿ ಕಾಂಗ್ರೆಸ್‌ ಮಾಡಿದ್ದ ಟ್ವೀಟ್‌ ಗೆ ಪ್ರತಿಕ್ರಿಯೆಗಾಗಿ ಬುಧವಾರ ಸರಣಿ ಟ್ವೀಟ್‌ ಮಾಡಿದ ಬಿಜೆಪಿ ಸಿದ್ದರಾಮಯ್ಯರ ವಿರುದ್ಧವೂ ಕಿಡಿ ಕಾರಿದೆ. 

''ದಲಿತರು ಈ ಬಾರಿ ನಿಮ್ಮನ್ನು ಸೋಲಿಸುತ್ತಾರೆ ಎಂಬ ಸಮೀಕ್ಷೆ ಆಧರಿಸಿ ಕೋಲಾರ ಬಿಟ್ಟು ಓಡಿದ ಸಿದ್ದರಾಮಯ್ಯ ಅವರೇ, ದಲಿತ  ನಾಯಕರನ್ನು ಸೋಲಿಸಿದ ನೀವು ಯಾವ ಮುಖವಿಟ್ಟುಕೊಂಡು  ದಲಿತರಲ್ಲಿ ಓಟು ಕೇಳುತ್ತೀರಿ?'' ಎಂದು ಬಿಜೆಪಿ ಪ್ರಶ್ನಿಸಿದೆ. 

''ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ದಲಿತ ನಾಯಕರಾದ ಡಾ.ಜಿ ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ, ಶ್ರೀನಿವಾಸ್ ಪ್ರಸಾದ್, ಮುನಿಯಪ್ಪ ಅವರನ್ನು ಮೂಲೆಗುಂಪು ಮಾಡಿತ್ತು. ಅಖಂಡ ಶ್ರೀನಿವಾಸಮೂರ್ತಿ ಮೇಲೆ ದಾಳಿ ನಡೆದಾಗಲು, ತುಷ್ಟೀಕರಣದ ಕಾರಣದಿಂದ ಅವರನ್ನು ಕಾಂಗ್ರೆಸ್ ಬೆಂಬಲಿಸಲಿಲ್ಲ'' ಎಂದು ಬಿಜೆಪಿ ಹೇಳಿದೆ. 

''ದಲಿತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡ ಕಾಂಗ್ರೆಸ್ ಪಕ್ಷವು ದಲಿತರಿಗೆ ಮೀಸಲಾತಿಯನ್ನು ಕೊಡುವುದನ್ನು ನಿರಾಕರಣೆ ಮಾಡಿತ್ತು. ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಹೆಚ್ಚಿಸಿದ್ದು, ಲಂಬಾಣಿ ಸಮುದಾಯಕ್ಕೆ ಹಕ್ಕು ಪತ್ರವನ್ನು ವಿತರಣೆ ಮಾಡಿದ್ದು ನಮ್ಮ ಸರ್ಕಾರ'' ಎಂದು ಬಿಜೆಪಿ ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)